Thursday, June 4, 2026
Homeಕರಾವಳಿಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲೀಫ್ ಎಂದು ರಿಲ್ಯಾಕ್ಸ್ ಆಗಿದ್ದ ತಿಮರೋಡಿಗೆ ಶಾಕ್; ಆ. 29...

ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲೀಫ್ ಎಂದು ರಿಲ್ಯಾಕ್ಸ್ ಆಗಿದ್ದ ತಿಮರೋಡಿಗೆ ಶಾಕ್; ಆ. 29 ರಂದು ಮಹೇಶ್ ತಿಮರೋಡಿ ಹಾಗೂ ಪತ್ನಿಗೆ ಖುದ್ದು ಹಾಜರಾತಿಗೆ ಹೈಕೋರ್ಟ್ ಆದೇಶ

- Advertisement -
- Advertisement -

ಬೆಳ್ತಂಗಡಿ; ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲೀಫ್ ಎಂದು ರಿಲ್ಯಾಕ್ಸ್ ಆಗಿದ್ದ ತಿಮರೋಡಿಗೆ ಹೈಕೋರ್ಟ್ ಶಾಕ್ ಕೊಟ್ಟಿದೆ. ಆ. 29 ರಂದು  ಮಹೇಶ್ ತಿಮರೋಡಿ ಹಾಗೂ ಅವರ ಪತ್ನಿಗೆ ಖುದ್ದು ಹೈಕೋರ್ಟ್ ಗೆ ಹಾಜರಾಗುವಂತೆ ಕೋರ್ಟ್  ಆದೇಶ  ನೀಡಿದೆ.

ನ್ಯಾಯಾಂಗ ‌ನಿಂದನೆ ಯಾಗೂ ನ್ಯಾಯಾಧೀಶರನ್ನು ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಷರತ್ತಾಗಿ ಕ್ಷಮೆಯಾಚಿಸಿ ಮಹೇಶ್ ಶೆಟ್ಟಿ ತಿಮರೋ‌ಡಿ‌ ಸಲ್ಲಿದ ಪ್ರಮಾಣ ಪತ್ರವನ್ನು ಪುರಸ್ಕರಿಸಿದ ನ್ಯಾಯಾಲಯವು ನ್ಯಾಯಾಧೀಶರನ್ನು ನಿಂದಿಸಿದ ಪ್ರಕರಣವನ್ನು  ಮುಕ್ತಾಯಗೊಳಿಸಿತ್ತು. ಆದರೆ ಇದೀಗ ಇನ್ನುಳಿದಂತೆ ಭೂ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿ ಮುಕ್ತಾಯಗೊಂಡಿರುವುದಿಲ್ಲವಾಗಿದ್ದು, ಆ ಪ್ರಕರಣದಲ್ಲಿ‌ ಇದೇ ಆಗಸ್ಟ್ 29 ನ್ಯಾಯಾಲಯದ ಮುಂದೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಪತ್ನಿಗೆ  ಖುದ್ದು ಹಾಜರಾತಿ ಗೆ ಆದೇಶ ಮಾಡಿದೆ.

- Advertisement -

Latest News

error: Content is protected !!