Wednesday, June 24, 2026
Homeತಾಜಾ ಸುದ್ದಿಇನ್ನು ಮುಂದೆ ಸರ್ಕಾರಿ ನೌಕರರೂ ಆರ್.ಎಸ್.ಎಸ್ ಸೇರಬಹುದು; ಇಂದಿರಾ ಗಾಂಧಿ ಸರಕಾರ ಹೇರಿದ್ದ ಕಾನೂನು 58...

ಇನ್ನು ಮುಂದೆ ಸರ್ಕಾರಿ ನೌಕರರೂ ಆರ್.ಎಸ್.ಎಸ್ ಸೇರಬಹುದು; ಇಂದಿರಾ ಗಾಂಧಿ ಸರಕಾರ ಹೇರಿದ್ದ ಕಾನೂನು 58 ವರ್ಷಗಳ ಬಳಿಕ ನಿಷೇಧ..!

- Advertisement -
- Advertisement -

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(RSS)ದ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗಿಯಾಗುವುದನ್ನು ನಿಷೇಧಿಸಿ ಜಾರಿಗೊಳಿಸಲಾಗಿದ್ದ ಕಾನೂನನ್ನು ಹಿಂಪಡೆಯಲಾಗಿದೆ ಎಂದು ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ ಹೇಳಿದ್ದಾರೆ.

ಅವರು ಈ ಕುರಿತಂತೆ ತಮ್ಮ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದು, ಸಂವಿಧಾನಿಕ ರೀತಿಯಲ್ಲಿ ನ. 7, 1966ರಂದು ಸರ್ಕಾರಿ ನೌಕರರ ಮೇಲೆ ಈ ನಿರ್ಬಂಧ ವಿಧಿಸಲಾಗಿತ್ತು. ಅಂದು ಗೋಹತ್ಯೆ ವಿರುದ್ಧ ಸಂಸತ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಆರೆಸ್ಸೆಸ್-ಜನಸಂಘ ಲಕ್ಷಾಂತರ ಜನರ ಬೆಂಬಲ ಸಂಗ್ರಹಿಸಿತ್ತು. ಪೋಲೀಸರ ಗುಂಡಿನ ದಾಳಿಯಲ್ಲಿ ಹಲವರು ಮೃತರಾದರು. ಆರ್‌ಎಸ್‌ಎಸ್-ಜನಸಂಘದ ಪ್ರಭಾವಕ್ಕೆ 1966 ನವೆಂಬರ್ 30 ರಂದು, ಸರ್ಕಾರವೇ ನಲುಗಿತ್ತು. ಇದಾದ ಬಳಿಕ ಇಂದಿರಾ ಗಾಂಧಿ ಸರ್ಕಾರಿ ಸಿಬ್ಬಂದಿಯನ್ನು ಆರ್‌ಎಸ್‌ಎಸ್‌ಗೆ ಸೇರುವುದನ್ನು ನಿಷೇಧಿಸಿದರು. ಇಂದಿರಾ ಗಾಂಧಿಯವರು ಫೆಬ್ರವರಿ 1977 ರಲ್ಲಿ RSS ಮುಖಂಡರನ್ನು ಭೇಟಿ ಮಾಡಿ, ತಮ್ಮ ಚುನಾವಣಾ ಪ್ರಚಾರಕ್ಕೆ ಬೆಂಬಲ ನೀಡಬೇಕಾಗಿ ಮನವಿ ಮಾಡಿದರು. ಇದಕ್ಕೆ ಬದಲಾಗಿ ನಿಷೇಧವನ್ನು ತೆಗೆದುಹಾಕುವ ಪ್ರಸ್ತಾಪವನ್ನಿಟ್ಟಿದ್ದರು,” ಎಂದು ಬರೆದುಕೊಂಡಿದ್ದಾರೆ. 

https://x.com/amitmalviya/status/1815222383843979765/photo/1

ಈ ಬಗ್ಗೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಮ್ಮ ಎಕ್ಸ್ ನಲ್ಲಿ, “ಮಹಾತ್ಮಾ ಗಾಂಧಿಯವರ ಹತ್ಯೆಯ ನಂತರ 1948 ರ ಫೆಬ್ರವರಿಯಲ್ಲಿ ದೇಶದ ಮೊದಲ ಗೃಹ ಸಚಿವ ವಲ್ಲಭಭಾಯಿ ಪಟೇಲ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದರು ಎಂದು ಹೇಳಿದ್ದಾರೆ. ನಂತರ ಉತ್ತಮ ನಡವಳಿಕೆಯ ಭರವಸೆಯ ಮೇರೆಗೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. ಇದಾದ ನಂತರವೂ ಆರ್‌ಎಸ್‌ಎಸ್ ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲಿಲ್ಲ. 1996 ರಲ್ಲಿ, RSS ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧವನ್ನು ಹೇರಲಾಯಿತು ಮತ್ತು ಜುಲೈ 9, 2024 ರಂದು, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜಾರಿಯಲ್ಲಿದ್ದ 58 ವರ್ಷಗಳ ನಿಷೇಧವನ್ನು ತೆಗೆದುಹಾಕಲಾಯಿತು, ಎಂದು ರಮೇಶ್ ಬರೆದುಕೊಂಡಿದ್ದಾರೆ.

 https://x.com/Jairam_Ramesh/status/1815078911346344251/photo/1

- Advertisement -

Latest News

error: Content is protected !!