ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡುವ ಭಕ್ತರು ಇನ್ನು ಮುಂದೆ ದೇವಾಲಯದಿಂದ ಜಾರಿಯಾದ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕಿದೆ.
ಈ ಹೊಸ ವಸ್ತ್ರ ಸಂಹಿತೆ ಆ. 15 ರಿಂದ ಜಾರಿಯಾಗಲಿದೆ. ಇನ್ಮುಂದೆ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಪಂಚೆ, ಶಲ್ಯ,ದೋತಿ, ಸೀರೆಗಳನ್ನು ಮಾತ್ರ ಧರಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ 20 ದಿನಗಳ ಹಿಂದೆಯೇ ಆದೇಶ ಹೊರಡಿಸಿತ್ತು.
ವಸ್ತ್ರ ಸಂಹಿತೆ ಜಾರಿಗೊಳಿಸಲು ಮುಖ್ಯ ಕಾರಣ: ಯುವಜನತೆ ಇತ್ತೀಚಿನ ದಿನಗಳಲ್ಲಿ ತಮಗೆ ಇಷ್ಟಬಂದಂತಹ ಸಿಕ್ಕ ಸಿಕ್ಕ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗೆ ದೇವಸ್ಥಾನದ ಆಚಾರ ವಿಚಾರಗಳನ್ನು ಮೂಲೆ ಗುಂಪಾಗಿಸುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಶೃಂಗೇರಿಯ ಶಾರದಾ ಪೀಠದ ಆಡಳಿತ ಮಂಡಳಿ ವಸ್ತ್ರ ಸಂಹಿತೆ ಜಾರಿ ಮಾಡಿದ್ದು. ಇನ್ಮುಂದೆ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಪಂಚೆ, ಶಲ್ಯ,ದೋತಿ, ಸೀರೆಗಳನ್ನು ಮಾತ್ರ ಧರಿಸಬೇಕಾಗಿದೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಆಗ್ರಹಕ್ಕೆ ಮನ್ನಣೆ!; ಹೌದು ಈ ಹಿಂದೆಯೇ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಶರಣ್ ಪಂಪ್ವೆಲ್ ಆಗ್ರಹಿಸಿದ್ದರು. ಯವಜನತೆ ಅರೆಬರೆ ಬಟ್ಟೆ ಧರಿಸಿ ಭೇಟಿ ನೀಡುವುದರಿಂದ ದೇವಸ್ಥಾನಗಳ ಪಾವಿತ್ರ್ಯತೆ ಹಾಳಾಗುತ್ತಿದೆ. ಈ ಕಾರಣ ಎಲ್ಲಾ ದೇಗುಲಗಳಲ್ಲೂ ವಸ್ತ್ರ ಸಂಹಿತೆ ಜಾರಿಯಾಗಬೇಕೆಂದು ತಿಳಿಸಿದ್ದರು. ಇದರಂತೆಯೇ ಸದ್ಯಕ್ಕೆ ಶೃಂಗೇರಿಯಲ್ಲಿ ಹೊಸ ವಸ್ತ್ರ ಸಂಹಿತೆ ಜಾರಿಯಾಗಿದೆ.


