- Advertisement -
- Advertisement -
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಸೋಮವಾರ ಮಳೆಯಾಗಿದೆ. ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಉತ್ತಮ ಮಳೆ ಬಂದಿದೆ.
ಉಡುಪಿ, ಮಣಿಪಾಲ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ರಾತ್ರಿ ವೇಳೆಗೆ ಮಳೆ ಬಂದಿದೆ.
ಸುಳ್ಯ ತಾಲೂಕಿನ ಕಳಂಜ ಗ್ರಾಮದ ಮಣಿಮಜಲಿನಲ್ಲಿ ತೋಡಿನ ನೀರು ಕೃಷಿ ಭೂಮಿಗೆ ನುಗ್ಗಿದ್ದರಿಂದ ಹಾನಿ ಸಂಭವಿಸಿದೆ. ತೋಟದಲ್ಲಿದ್ದ ಕೆಲವು ಜೇನು ಪೆಟ್ಟಿಗೆಗಳು, ಅಡಿಕೆ ಗಿಡಗಳು ನೀರಿನಲ್ಲಿ ಮುಳುಗಿವೆ. ಮಂಗಳೂರು, ಬಂಟ್ವಾಳ, ಮೂಡುಬಿದಿರೆ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿತ್ತು.
- Advertisement -