Sunday, June 7, 2026
Homeಕರಾವಳಿಮಂಗಳೂರು: ವಾಹನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ; ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ!

ಮಂಗಳೂರು: ವಾಹನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ; ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ!

- Advertisement -
- Advertisement -

ಮಂಗಳೂರು: ಮುಂಬರುವ ಡಿಸೆಂಬರ್ 23ರವರೆಗೆ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರಿಂದ ಈ ರಸ್ತೆಯಲ್ಲಿನ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಕೆ.ಎಸ್.ಆರ್ ರಸ್ತೆಯಿಂದ ಪಿ.ಎಂ. ರಾವ್ ರಸ್ತೆ ಮೂಲಕ ಗಣಪತಿ ಹೈಸ್ಕೂಲ್ ರಸ್ತೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು ಜೊತೆಗೆ ಶರವು ವಿಮಲೇಶ್ ಜಂಕ್ಷನ್ ನಿಂದ ಕೆ.ಎಸ್.ಆರ್. ಜಂಕ್ಷನ್ ವರೆಗಿನ ರಸ್ತೆಯಲ್ಲಿ ಶರವು ಮಹಾಗಣಪತಿ ದೇವಸ್ಥಾನ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಹನಗಳು ನೇರವಾಗಿ ಹಂಪನಕಟ್ಟೆ ಜಂಕ್ಷನ್ ಮೂಲಕ ಸಂಚರಿಸಬೇಕು.

ಕೆ.ಬಿ.ಕಟ್ಟೆ ಜಂಕ್ಷನ್ ಗಣಪತಿ ಹೈಸ್ಕೂಲ್ ರಸ್ತೆ ಶರವು ದೇವಸ್ಥಾನ ರಸ್ತೆಯ ಮೂಲಕ ಕೆ.ಎಸ್.ಆರ್.ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಪಿ.ಎಂ.ರಾವ್ ರಸ್ತೆಯ ಮೂಲಕ ಕೆ.ಎಸ್.ಆರ್ ರಸ್ತೆ ಕಡೆಗೆ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!