Tuesday, July 21, 2026
Homeತಾಜಾ ಸುದ್ದಿವಿಟ್ಲ: ಸಂಜೆಯಿಂದ ಭಾರೀ ಮಳೆ ಗಾಳಿ: ಸಾಕಷ್ಟು ಮನೆಗಳಿಗೆ ಹಾನಿ

ವಿಟ್ಲ: ಸಂಜೆಯಿಂದ ಭಾರೀ ಮಳೆ ಗಾಳಿ: ಸಾಕಷ್ಟು ಮನೆಗಳಿಗೆ ಹಾನಿ

- Advertisement -
- Advertisement -

ವಿಟ್ಲ: ಸಂಜೆ ವೇಳೆ ಬಂದ ಭಾರೀ ಮಳೆಗಾಳಿಗೆ ವಿಟ್ಲದ ಅಲ್ಲಲ್ಲಿ ಹಾನಿ ಸಂಭವಿಸಿದೆ‌. ವಿಟ್ಲ ಬೊಬ್ಬೆಕೇರಿ ಮೀನು ಮಾರುಕಟ್ಟೆ ಸಮೀಪದ ಬೀಪಾತುಮ್ಮ ಅವರ ಮನೆಯ ಸೀಟಿನ ಛಾವಣಿ ಗಾಳಿಗೆ ಹಾರಿ ಹೋಗಿ ಸಂಪೂರ್ಣ ಹಾನಿಯಾಗಿದೆ. ಮನೆಮಂದಿಯನ್ನು ಸಮೀಪದ ಮನೆಗೆ ಸ್ಥಳಾಂತರ ಮಾಡಲಾಗಿದೆ.

ವಿಟ್ಲ ಸಾಲೆತ್ತೂರು ರಸ್ತೆಯ ನಿವಾಸಿ ಪಾಡುರಂಗ ಆಚಾರ್ಯ ಅವರ ಮನೆಗೆ  ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ಅದೇ ರೀತಿ ವಿಟ್ಲ ಸುತ್ತಮುತ್ತಲು ಅಪಾರ ಹಾನಿ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಆಗಮಿಸಿ, ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!