Saturday, June 6, 2026
Homeಕರಾವಳಿಬಂಟ್ವಾಳದಲ್ಲಿ ಜ್ವರಕ್ಕೆ ಯುವಕ ಬಲಿ: ಡೆಂಗ್ಯೂ ಜ್ವರ ಶಂಕೆ

ಬಂಟ್ವಾಳದಲ್ಲಿ ಜ್ವರಕ್ಕೆ ಯುವಕ ಬಲಿ: ಡೆಂಗ್ಯೂ ಜ್ವರ ಶಂಕೆ

- Advertisement -
- Advertisement -

ಬಂಟ್ವಾಳ: ಜ್ವರದಿಂದ‌ ಬಳಲುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬಂಟ್ವಾಳ ವಾಮದಪದವಿನಲ್ಲಿ ನಡೆದಿದೆ. ಇನ್ನು ಯುವಕ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಾಮದಪದವು ನಿವಾಸಿ ಕೃಷಿಕ ಸಂದೀಪ್ ಪೂಜಾರಿ(31) ಮೃತಪಟ್ಟ ಯುವಕ.

ಜ್ವರದಿಂದ ಬಳಲುತ್ತಿದ್ದ ಸಂದೀಪ್ ಪೂಜಾರಿ ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಂದೀಪ್ ಅವರ ತಂದೆ ಹಳ್ಳಿ ವೈದ್ಯನಾಗಿ ಸೇವೆ ಸಲ್ಲಿಸಿದರೆ, ತಾಯಿ ಪುಷ್ಪಾವತಿ ವಾಮದಪದವು ಗ್ರಾಮಪಂಚಾಯತ್ ಸದಸ್ಯರಾಗಿದ್ದಾರೆ. ಇತ್ತೀಚಿಗೆ ಮದುವೆಯಾಗಿದ್ದ ಸಂದೀಪ್ ಒಂದು ವರ್ಷದ ಮಗು, ಪತ್ನಿ ಸಹಿತ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!