Monday, April 29, 2024
Homeಕರಾವಳಿಮಂಗಳೂರುವೇಣೂರು ಪಟಾಕಿ ಘಟಕ ಸ್ಫೋಟ ಪ್ರಕರಣ: ನಿಯಮ ಮೀರಿ ರಾಸಾಯನಿಕ ದಾಸ್ತಾನು ಸ್ಫೋಟಕ್ಕೆ ಕಾರಣ?

ವೇಣೂರು ಪಟಾಕಿ ಘಟಕ ಸ್ಫೋಟ ಪ್ರಕರಣ: ನಿಯಮ ಮೀರಿ ರಾಸಾಯನಿಕ ದಾಸ್ತಾನು ಸ್ಫೋಟಕ್ಕೆ ಕಾರಣ?

spot_img
- Advertisement -
- Advertisement -

ಬೆಳ್ತಂಗಡಿ: ವೇಣೂರಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಅನುಮತಿಗಿಂತ ಜಾಸ್ತಿ ಗನ್ ಪೌಡರ್ ಶೇಖರಣೆ ಮಾಡಿ ಇರಿಸಿದ್ದೇ ಸ್ಫೋಟಕ್ಕೆ ಕಾರಣವಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಫೋಟ ಸಂಭವಿಸಿರುವ ಸಾಲಿಡ್ ಫೈರ್ ವರ್ಕ್ಸ್ ಮಾಲೀಕ ಸೈಯ್ಯದ್ ಬಷೀರ್ 15 ಕೆಜಿ ಸಂಗ್ರಹಕ್ಕೆ ಅನುಮತಿ ಪಡೆದು
100 ಕೆಜಿ ಗನ್ ಪೌಡರ್ ದಾಸ್ತಾನು‌ ಇರಿಸಲಾಗಿತ್ತು ಎಂದು ಹೇಳಲಾಗಿದೆ.

ಪಟಾಕಿ ತಯಾರಿಕೆಗೆ ಪೊಟ್ಯಾಷಿಯಂ ಕ್ಲೋರೈಟ್ ಮತ್ತು ಪೊಟ್ಯಾಷಿಯಂ ನೈಟ್ರೇಟ್ ಬಳಕೆ ಮಾಡಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇದ್ದು ಲೋಡಿಂಗ್ ವೇಳೆ ಹೈ ಪ್ರೆಷರ್ ನಿಂದಾಗಿ ಸ್ಫೋಟ ಸಂಭವಿಸಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ವಿಧಿ ವಿಜ್ಞಾನ ತಂಡ ಸ್ಥಳದಿಂದ ಸುಮಾರು 80ಕ್ಕೂ ಹೆಚ್ಚು ಸ್ಯಾಂಪಲ್ ಗಳನ್ನು ಸಂಗ್ರಹಿಸಿದೆ.

ಇದೇ ವೇಳೆ, ಮೈಸೂರಿನ ಕಾರ್ಯಕ್ರಮವೊಂದಕ್ಕೆ ಪಟಾಕಿ ಪೂರೈಸಲು ನಿಯಮ ಉಲ್ಲಂಘಿಸಿ ರಾಸಾಯನಿಕ ದಾಸ್ತಾನು ಇರಿಸಲಾಗಿತ್ತು ಎಂದೂ ಹೇಳಲಾಗಿದೆ

- Advertisement -
spot_img

Latest News

error: Content is protected !!