Tuesday, May 14, 2024
Homeಕರಾವಳಿಕರಾವಳಿಯಲ್ಲಿ ಏರುತ್ತಿರುವ ತಾಪಮಾನ; ಜಿಲ್ಲಾಡಳಿತದಿಂದ ಮಾರ್ಗಸೂಚಿ ಪ್ರಕಟ

ಕರಾವಳಿಯಲ್ಲಿ ಏರುತ್ತಿರುವ ತಾಪಮಾನ; ಜಿಲ್ಲಾಡಳಿತದಿಂದ ಮಾರ್ಗಸೂಚಿ ಪ್ರಕಟ

spot_img
- Advertisement -
- Advertisement -

ಮಂಗಳೂರು; ದ.ಕ ಜಿಲ್ಲೆಯಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದ್ದು ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ರವಿಕುಮಾರ್ ಮರ್ಗಸೂಚಿ ಪ್ರಕಟಿಸಿದ್ದಾರೆಯ.

ಉಪಾಹಾರ ಗೃಹಗಳು, ಕ್ಯಾಂಟೀನ್‌ಗಳು, ಹೊಟೇಲ್‌ಗ‌ಳು, ಬಾರ್‌ಗಳು, ಬೇಕರಿಗಳಿಗೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆಯನ್ನು ಹೊರಡಿಸಿದ್ದಾರೆ.

ನೀರಿನ ಮೂಲಗಳನ್ನು ಶುಚಿಗೊಳಿಸಬೇಕು.ಸೂಕ್ತ ತಾಪಮಾನದಲ್ಲಿ ಆಹಾರವನ್ನು ಸಂಗ್ರಹಿಸಬೇಕು. ಕುಡಿಯಲು ಶುದ್ಧೀಕರಿಸಿದ ಹಾಗೂ ಬಿಸಿನೀರು ಪೂರೈಕೆ ಮಾಡಬೇಕು.

ಹೊಟೇಲ್‌ಗ‌ಳಲ್ಲಿ ಆಹಾರ ಅಥವಾ ಅಡುಗೆ ತಯಾರಕರು ವೈಯಕ್ತಿಕ ಶುಚಿತ್ವ ಖಚಿತ ಪಡಿಸಿಕೊಳ್ಳಬೇಕು. ಅನಾರೋಗ್ಯದ ವೇಳೆ ಆಹಾರವನ್ನು ತಯಾರಿಸುವ, ಸರಬರಾಜು ಮಾಡುವ ಮತ್ತು ಬಡಿಸುವ ಕಾರ್ಯ ಮಾಡಬಾರದು..

ಉಪಾಹಾರಗೃಹಗಳು, ಕ್ಯಾಂಟೀನ್‌, ಹೊಟೇಲ್‌, ಬಾರ್‌, ಬೇಕರಿಗಳಲ್ಲಿ ಅಡುಗೆಮನೆಗೆ ಪ್ರವೇಶಿಸುವ ಮೊದಲು ಕೈಗವಚಗಳು ಮತ್ತು ಹೆಡ್‌ಕವರ್‌ ಗಳು ಧರಿಸಬೇಕು. ಆಹಾರ ತಯಾರಿಸುವ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ತರಕಾರಿಗಳು ಮತ್ತು ಹಣ್ಣುಗಳನ್ನು ವ್ಯವಸ್ಥಿತ ಹಾಗೂ ಶುಚಿಯಾಗಿ ಸಂಗ್ರಹಿಸಿಡಬೇಕು.

ಮಂಜುಗಡ್ಡೆಗಳನ್ನು ತಯಾರಿಸುವ ಹಾಗೂ ಸರಬರಾಜು ಮಾಡುವ ಸಂಸ್ಥೆಯು ಶುದ್ಧ ನಿರಿನ ಬಳಕೆಯನ್ನು ಖಾತ್ರಿಪಡಿಸಿ ಕೊಳ್ಳಬೇಕು.ಹಸಿಮೀನು, ಮಾಂಸ ಮಾರಾಟಗಾರರು ತಾಜಾತನವನ್ನು ಖಚಿತಪಡಿಸಿಕೊಳ್ಳಬೇಕು.

ಬೀದಿ ಬದಿ ಆಹಾರ ಪದಾರ್ಥಗಳ ಶುಚಿತ್ವವನ್ನು ಖಾತರಿ ಪಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!