Saturday, May 18, 2024
Homeಕರಾವಳಿಎಪ್ರಿಲ್ 18ರಿಂದ ಜಿಲ್ಲೆಯಲ್ಲಿ ತಾಲೂಕು ಮಟ್ಟದ  ಆರೋಗ್ಯ ಮೇಳ

ಎಪ್ರಿಲ್ 18ರಿಂದ ಜಿಲ್ಲೆಯಲ್ಲಿ ತಾಲೂಕು ಮಟ್ಟದ  ಆರೋಗ್ಯ ಮೇಳ

spot_img
- Advertisement -
- Advertisement -

ಮಂಗಳೂರು: ಎಪ್ರಿಲ್ 18ರಿಂದ ದ.ಕ.ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಹೇಳಿದ್ದಾರೆ.


ಮಂಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎ.18ರಂದು ಪುತ್ತೂರು ಸುಧಾನ ವಸತಿ ಶಾಲೆಯಲ್ಲಿ, ಎ.19ರಂದು ಬೆಳ್ತಂಗಡಿಯ ಕೃಷ್ಣಾನುಗೃಹ ಸಭಾಂಗಣದಲ್ಲಿ, ಎ.20ರಂದು ಸುರತ್ಕಲ್ ಆರೋಗ್ಯ ಕೇಂದ್ರ, ಎ.21ರಂದು ಬಂಟ್ವಾಳದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ.22ರಂದು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಮೇಳ ನಡೆಯಲಿದೆ.


ಈ ಮೇಳದಲ್ಲಿ ಆಯುಷ್ಮಾನ್ ಭಾರತ್ ಬಗ್ಗೆ ಮಾಹಿತಿ ನೀಡುವ ಜತೆಗೆ ಸ್ಥಳದಲ್ಲೇ ರೇಶನ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್ ನೀಡುವವರಿಗೆ ಕಾರ್ಡ್ ವಿತರಿಸಲಾಗುವುದು. ಇದೇ ವೇಳೆ ಹೆಲ್ತ್ ಕಾರ್ಡ್ ನೀಡುವ ಬಗ್ಗೆಯೂ ಕ್ರಮ ವಹಿಸಲಾಗಿದೆ. ಈ ಆರೋಗ್ಯ ಕಾರ್ಡ್ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಅಗತ್ಯವಾಗಿದ್ದು, ಈ ಕಾರ್ಡ್ ಹೊಂದಿರುವವರು ತಾವು ಈ ಹಿಂದೆ ಯಾವುದೇ ಆಸ್ಪತ್ರೆಯಲ್ಲಿ ಪಡೆದಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಮುಂದಿನ ಚಿಕಿತ್ಸೆಯ ವೇಳೆ ಆ ಆಸ್ಪತ್ರೆಯ ವೈದ್ಯರಿಗೆ ಲಭ್ಯವಾಗಲಿದೆ ಎಂದರು.

- Advertisement -
spot_img

Latest News

error: Content is protected !!