Saturday, May 18, 2024
Homeತಾಜಾ ಸುದ್ದಿಬೆತ್ತಲೆ ಪೇಂಟಿಂಗ್: ರೆಹಾನಾ ಫಾತಿಮಾ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

ಬೆತ್ತಲೆ ಪೇಂಟಿಂಗ್: ರೆಹಾನಾ ಫಾತಿಮಾ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ

spot_img
- Advertisement -
- Advertisement -

ಕೊಚ್ಚಿನ್: ಶಬರಿಮಲೆ ವಿವಾದ ಕು’ಖ್ಯಾತಿ’ಯ ಹೋರಾಟಗಾರ್ತಿ ರೆಹಾನಾ ಫಾತಿಮಾ ಅವರು ತಮ್ಮ ಅಪ್ರಾಪ್ತ ಮಕ್ಕಳಿಂದ ಟಾಪ್ ಲೆಸ್ ಆಗಿ ತನ ಬಾಡಿ ಪೇಂಟಿಂಗ್ ಮಾಡಿಸಿದ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹಾನಾ ಫಾತಿಮಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈ ಕೋರ್ಟ್ ತಿರಸ್ಕರಿಸಿದೆ.

ಮಕ್ಕಳ ಮುಂದೆ ಅರೆನಗ್ನವಾಗಿ ಪೇಂಟಿಂಗ್‌ ಬಿಡಿಸಲು ನೆರವಾಗಿದ್ದ ಫಾತಿಮಾ ವಿರುದ್ಧ ಬಿಜೆಪಿಯ ಒಬಿಸಿ ಮೋರ್ಚಾ ನಾಯಕ ಎ.ವಿ. ಅರುಣ್ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಫಾತಿಮಾ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದ ರೆಹಾನಾ ಫಾತಿಮಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿ ಕೇರಳ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ರೆಹಾನಾ ಹಂಚಿಕೊಂಡಿರುವ ವಿಡಿಯೋದಲ್ಲಿ ರೆಹಾನ ಬೆಡ್ ಮೇಲೆ ಅರ್ಧ ನಗ್ನಾವಸ್ಥೆಯಲ್ಲಿ ಮಲಗಿಕೊಂಡಿದ್ದು, ಆಕೆಯ ಮಕ್ಕಳು ಆಕೆಯ ಶರೀರದ ಮೇಲೆ ಪೇಂಟಿಂಗ್ ಮಾಡುತ್ತಿದ್ದಾರೆ. ಈ ವಿಡಿಯೋ ಅನ್ನು ಫೇಸ್ ಬುಕ್ ಮತ್ತು ಯುಟ್ಯೂಬ್ ಮೇಲೆ ಹಂಚಿಕೊಂಡಿರುವ ಫಾತಿಮಾ, ಕಣ್ಣಿನಲ್ಲಿ ಸೊಂಕಿರುವ ಕಾರಣ ತಾವು ವಿಶ್ರಮಿಸುತ್ತಿದ್ದು, ಈ ವೇಳೆ ತಮ್ಮ ಮಕ್ಕಳು ಶರೀರದ ಮೇಲೆ ಪೇಂಟಿಂಗ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಳು.

ಇದಕ್ಕೂ ಮೊದಲು ಕೂಡ ರೆಹಾನಾ ಫಾತೀಮಾ ಸಾಮಾಜಿಕ ಮಾಧ್ಯಮಗಳ ಮೇಲೆ ಆಕ್ಷೇಪಾರ್ಹ ಭಾವಚಿತ್ರಗಳನ್ನು ಹಂಚಿಕೊಂಡು 18 ದಿನಗಳ ಸೆರೆವಾಸ ಅನುಭವಿಸಿದ್ದಾಳೆ.

- Advertisement -
spot_img

Latest News

error: Content is protected !!