- Advertisement -
- Advertisement -
ಮಂಗಳೂರು: ಅಪ್ರಾಪ್ತೆಗೆ ಫೋನ್ ಮಾಡುವಂತೆ ಪೀಡಿಸುತ್ತಿದ್ದುದಲ್ಲದೆ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಕಾವೂರಿನಲ್ಲಿ ನಡೆದಿದೆ.
ಈ ಬಗ್ಗೆ ಪಂಜಿಮೊಗರು ನಿವಾಸಿ ಮುಸ್ತಾಫ (35) ಎಂಬಾತನ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಾಲಕಿಯು ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಬಾಲಕಿ ಆರೋಪಿಯ ತರಕಾರಿ ಅಂಗಡಿಗೆ ಹೋದಾಗ ಫೋನ್ ಮಾಡುವಂತೆ ಪೀಡಿಸುತ್ತಿದ್ದ. ಆದರೆ ಬಾಲಕಿ ಫೋನ್ ಮಾಡುತ್ತಿರಲಿಲ್ಲ. ಯಾವುದೋ ಕೆಲಸಕ್ಕಾಗಿ ಬಾಲಕಿಯ ತಾಯಿ ಆರೋಪಿಗೆ ಫೋನ್ ಮಾಡಿದ್ದಾಗ, ಫೋನ್ ನಂಬರ್ ಸೇವ್ ಮಾಡಿಕೊಂಡು ಆ ಮೊಬೈಲ್‌ಗೆ ತನ್ನ ಮೊಬೈಲ್‌ನಿಂದ ಫೋನ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ.
ಜು. 8ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಬಂದು ಮಾನಭಂಗಕ್ಕೆ ಯತ್ನಿಸಿದ್ದ. ಈ ವಿಚಾರ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿರುವುದಾಗಿ ಎಫ್‌ಐಆರ್ ದಾಖಲಾಗಿದೆ.
- Advertisement -