Sunday, June 7, 2026
Homeಕರಾವಳಿಮಂಗಳೂರು; ತೆಂಗಿನಕಾಯಿ ತೆಗೆಯಲು ಬಂದ ಯುವಕನಿಂದ ಬಾಲಕಿಗೆ ಕಿರುಕುಳ ಆರೋಪ

ಮಂಗಳೂರು; ತೆಂಗಿನಕಾಯಿ ತೆಗೆಯಲು ಬಂದ ಯುವಕನಿಂದ ಬಾಲಕಿಗೆ ಕಿರುಕುಳ ಆರೋಪ

- Advertisement -
- Advertisement -

ಮಂಗಳೂರು; ;ತೆಂಗಿನಕಾಯಿ ತೆಗೆಯಲು ಬಂದ ಯುವಕನೊಬ್ಬ ಬಾಲಕಿಗೆ ಕಿರುಕುಳ ನೀಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿ ಮಂಜನಾಡಿ ನಿವಾಸಿ ಬಶೀರ್(28)ನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಶೀರ್ ತೆಂಗಿನಕಾಯಿ ತೆಗೆಯುವ ಕೆಲಸ ಮಾಡುವವನಾಗಿದ್ದು, ಬಾಲಕಿಯ ಮನೆಯವರಿಗೆ ಪರಿಚಿತನಾಗಿದ್ದ.ನಿನ್ನೆ ಮಧ್ಯಾಹ್ನ ವೇಳೆ ತೆಂಗಿನಕಾಯಿ ತೆಗೆಯುವುದಾಗಿ ಹೇಳಿ ಹೋಗಿದ್ದು, ಬಾಲಕಿ ಒಂಟಿಯಾಗಿರುವುದನ್ನು ಕಂಡು ನನ್ನಷ್ಟೇ ನೀನು ಉದ್ದ ಇದ್ದೀಯಾ ಎಂದು ಮನೆಯೊಳಗಿದ್ದ ಬಾಲಕಿಯ ಕೈಯನ್ನು ಗಟ್ಟಿಯಾಗಿ ಹಿಡಿದು ಹೊರಗೆ ಎಳೆದಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಬಾಲಕಿ ಕಿರುಚಾಡಿದ್ದು,ಸ್ಥಳೀಯರು ತಕ್ಷಣ ಮನೆಯತ್ತ ಆಗಮಿಸಿ ಬಶೀರ್ ನನ್ನು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮನೆಮಂದಿ ಪ್ರಕರಣ ದಾಖಲಿಸಲು ಹಿಂಜರಿದಿದ್ದು,ವಿಚಾರ ತಿಳಿದ ಕೆಲವರು ಮನೆಯವರಿಗೆ ಸೂಚಿಸಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!