Sunday, April 28, 2024
Homeಕರಾವಳಿಬೆಳ್ತಂಗಡಿ : ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ ಪ್ರಕರಣ: ಘಟನಾ ಸ್ಥಳದಲ್ಲಿ ಹಲವು...

ಬೆಳ್ತಂಗಡಿ : ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ ಪ್ರಕರಣ: ಘಟನಾ ಸ್ಥಳದಲ್ಲಿ ಹಲವು ವಸ್ತುಗಳು ಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ : ಡಿ.12 ರಂದು ಸಂಜೆ ನಡ ಗ್ರಾಮದ ಕೇಳ್ತಾಜೆ ಬಳಿ ಅಪರಿಚಿತ ಮಹಿಳೆ ಶವವೊಂದು ಸುಟ್ಟ ರೀತಿಯಲ್ಲಿ ಕಂಡು ಬಂದಿತ್ತು. ಇಂದು ಡಿ.13 ರಂದು ನಡೆಸಲಾದ ತನಿಖೆಯಲ್ಲಿ ಇಂದು ಸುಟ್ಟ ಶವದ ಹಲವು ಗುರುತುಗಳು ಪತ್ತೆಯಾಗಿದೆ. ಮೃತದೇಹದಲ್ಲಿ ಎರಡು ಕಾಲು ಉಂಗುರ , ಕೈಯಲ್ಲಿ ನಾಗರ ಹಾವಿನ ರೀತಿಯ ಉಂಗುರ, ಕೈ ಬಲೆಗಳು, ಸುಟ್ಟ ರೀತಿಯಲ್ಲಿ ಚೈನ್ ವಾಚ್, ಕುತ್ತಿಗೆಗೆ ಹಾಕುವ ಶಿವಲಿಂಗಧಾರಣೆ , ಬಟ್ಟೆಯ ಬಟನ್ , ಸುಟ್ಟು ಉಳಿದ ಸ್ವಲ್ಪ ಬಟ್ಟೆಗಳು, ತಲೆಗೆ ಹಾಕುವ ಕ್ಲಿಪ್ ಪತ್ತೆಯಾಗಿದೆ.

ಸುಮಾರು 30-40 ವರ್ಷದ ಮಹಿಳೆಯ ಮೃತದೇಹ ಇದಾಗಿದೆ ಎಂದು ಡಾಕ್ಟರ್ ಮಹಾಬಲ ಶೆಟ್ಟಿ ಅವರು ಅಂದಾಜಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ಡಾ.ಅನಂತನ್ , ಡಾ.ಆಶಿವರ್ಮ, ಪ್ರಕಾಶ್ ಶವಪರೀಕ್ಷೆ ಮಾಡಿದ್ದು, ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಶವಗಾರ ಮಂಚೆಕಲ್ಲಿನಲ್ಲಿ ದಫನ ಮಾಡಿದ್ದಾರೆ.

ಮಂಗಳೂರು ಎಫ್ಎಸ್ಎಲ್ ನ ಡಾ.ವೀಣಾ ಮತ್ತು ತಂಡ ಹಾಗೂ ಮಂಗಳೂರು ದೇರಳಕಟ್ಟೆ(ಕೆ.ಎಸ್.ಹೆಗ್ಡೆ ಆಸ್ಪತ್ರೆಯ) ಡಾಕ್ಟರ್ ಮಹಾಬಲ ಶೆಟ್ಟಿ ಮತ್ತು ತಂಡ ತನಿಖೆಯಲ್ಲಿ ಭಾಗಿಯಾಗಿದ್ದರು. ಎಡಿಷನಲ್ ಎಸ್ಪಿ ಕುಮಾರ್ ಚಂದ್ರ , ಇನ್ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ನಂದಕುಮಾರ್ , ಎಎಸ್ಐ ತಿಲಕ್ ರಾಜ್. ಬೆರಳಚ್ಚುಗಾರರಾದ ಸಚಿನ್ ರೈ, ಉದಯ ಭಾಗಿ, ಶ್ವಾನ ದಳ ವಿಭಾಗದ ಗಣೇಶ್ , ಸುಂದರ್ ಶೆಟ್ಟಿ ತನಿಖೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!