Wednesday, June 24, 2026
Homeತಾಜಾ ಸುದ್ದಿಪ್ರಾಣಿಗಳಿಗಿಂತ ಕಡೆಯಾದ್ರಾ ಮನುಷ್ಯರು : ಸ್ವಂತ ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ: ನ್ಯಾಯ...

ಪ್ರಾಣಿಗಳಿಗಿಂತ ಕಡೆಯಾದ್ರಾ ಮನುಷ್ಯರು : ಸ್ವಂತ ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ: ನ್ಯಾಯ ಕೇಳಲು ಮಾವನ ಬಳಿ ಹೋದಾಗ ಮಾವನಿಂದಲೂ ರೇಪ್

- Advertisement -
- Advertisement -

ತೆಲಂಗಾಣ​: ಮನುಷ್ಯ ಪ್ರಾಣಿಗಳಿಗಿಂತ  ಕಡೇನಾ ಅನ್ನೋ ಅನುಮಾನ ಕೆಲವೊಮ್ಮೆ ಮೂಡುತ್ತೆ. ಅದಕ್ಕೆ ಪುಷ್ಟಿ ನೀಡುವಂತಹ ಹೀನ ಕೃತ್ಯವೊಂದು ತೆಲಂಗಾಣದಲ್ಲಿ ನಡೆದಿದೆ.  

ಕಾಮುಕ ಸಹೋದರನೊಬ್ಬ ಸ್ವಂತ ಸಹೋದರಿ ಮೇಲೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ತೆಲಂಗಾಣದ ಭದ್ರಾದ್ರಿ ಕೊಟ್ಟಗುಡೆಮ್​ ಜಿಲ್ಲೆಯಲ್ಲಿ ನಡೆದಿದೆ. ತಂದೆಯಿಲ್ಲದ ಸಂತ್ರಸ್ತೆ ತನ್ನ ತಾಯಿ ಮತ್ತು ಸಹೋದರನ ಜತೆ ವಾಸವಿದ್ದಳು.

ಇನ್ನು ಪಾಲಕರು ಸಂತ್ರಸ್ತೆಯ ಬೆಂಬಲಕ್ಕೆ ನಿಲ್ಲದಿದ್ದಾಗ ಆಕೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯಹೇಳಿಕೆಯಂತೆಸ್ವಂತ ಅಣ್ಣನೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಭದ್ರಾದ್ರಿ ಎಂದು ಗುರುತಿಸಲಾಗಿದೆ. ಈತ ಕೆಲವು ತಿಂಗಳಿಂದ ಸಹೋದರಿಗೆ ಕಿರುಕುಳ ನೀಡಿತ್ತಿದ್ದನಂತೆ. ಈ ಬಗ್ಗೆ ತಾಯಿಯ ಬಳಿ ಹೇಳಿಕೊಂಡರು ಯಾವುದೇ ಸಹಾಯ ಮಾಡಿಲ್ಲ.

ಇದಾದ ಬಳಿಕ ಅಜ್ಜಿ ಮನೆಗೆ ಹೋಗಿ ಸಂತ್ರಸ್ತೆ ತನ್ನ ನೋವನ್ನು ಹೇಳಿಕೊಂಡಿದ್ದಾಳೆ.  ಆದರೆ ಅಲ್ಲಿಯೂ ಸಹ ಅವರು ಆಕೆಗೆ ಬೆಂಬಲ ನೀಡಲಿಲ್ಲ. ಅದರ ಬದಲಾಗಿ ಅಜ್ಜಿ-ತಾತನ ಮಗನೇ ಸಂತ್ರಸ್ತೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಕಷ್ಟ ಹೇಳಿಕೊಳ್ಳಲು ಹೋದವಳ ಮೇಲೆ ಮತ್ತೆ ದೌರ್ಜನ್ಯ ನಡೆದಿದೆ. ಅಲ್ಲದೆ, ಈ ಬಗ್ಗೆ ಯಾರಿಗೂ ಹೇಳಿದಂತೆ ಬೆದರಿಕೆಯನ್ನು ಹಾಕಿದ್ದಾರೆ.

ಆದರೆ, ಕೊನೆಗೂ ಏನಾದರೂ ಆಗಲಿ ಎಂದು ಧೈರ್ಯ ಮಾಡಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. 

- Advertisement -

Latest News

error: Content is protected !!