Tuesday, April 23, 2024
Homeತಾಜಾ ಸುದ್ದಿಚೆಕ್‌ ಬೌನ್ಸ್‌ ಪ್ರಕರಣ: ಖ್ಯಾತ ನಟ ಶರತ್‌ ಕುಮಾರ್ ಮತ್ತು ರಾಧಿಕಾರಿಗೆ ತಲಾ 1...

ಚೆಕ್‌ ಬೌನ್ಸ್‌ ಪ್ರಕರಣ: ಖ್ಯಾತ ನಟ ಶರತ್‌ ಕುಮಾರ್ ಮತ್ತು ರಾಧಿಕಾರಿಗೆ ತಲಾ 1 ವರ್ಷ ಶಿಕ್ಷೆ.

spot_img
- Advertisement -
- Advertisement -

ಚೆನ್ನೈ: ಚೆಕ್ ಬೌನ್ಸ್ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಶರತ್‌ಕುಮಾರ್ ಮತ್ತು ಅವರ ಪತ್ನಿ ನಟಿ ರಾಧಿಕಾ ಶರತ್‌ಕುಮಾರ್ ಅವರಿಗೆ ಚೆನ್ನೈನ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಈ ದಂಪತಿಗಳ ವಿರುದ್ಧ ಬಾಕಿ ಇರುವ ಎರಡು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು 2019 ರಲ್ಲಿ ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು.

ಶರತ್ ಕುಮಾರ್ ಮತ್ತು ಅವರ ಪತ್ನಿ ಸಿನೆಮಾ ನಿರ್ಮಾಣ ಮಾಡುವ ಉದ್ದೇಶದಿಂದ ನಂದನಂನಲ್ಲಿರುವ ರೇಡಿಯನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ಭಾರಿ ಮೊತ್ತವನ್ನು ಸಾಲ ಪಡೆದಿದ್ದರು ಎನ್ನಲಾಗಿದೆ.

ಆದರೆ ಈ ಮೊತ್ತವನ್ನು ಮರುಪಾವತಿಯ ಸಮಯದಲ್ಲಿ ಶರತ್ ಕುಮಾರ್ ನೀಡಿರುವ ಚೆಕ್ 2017 ರಲ್ಲಿ ಬೌನ್ಸ್ ಆಗಿತ್ತು.

- Advertisement -
spot_img

Latest News

error: Content is protected !!