Thursday, June 4, 2026
Homeಕರಾವಳಿಉಡುಪಿಉಡುಪಿ; ಪಂಚಭೂತಗಳಲ್ಲಿ ಲೀನರಾದ ಕೆಜಿಎಫ್ ಚಾಚಾ: ಅಂಬಲಪಾಡಿಯ ಮೂಲ ಮನೆಯಲ್ಲಿ ಹರೀಶ್ ರಾಯ್ ಅಂತಿಮ ವಿಧಿವಿಧಾನ

ಉಡುಪಿ; ಪಂಚಭೂತಗಳಲ್ಲಿ ಲೀನರಾದ ಕೆಜಿಎಫ್ ಚಾಚಾ: ಅಂಬಲಪಾಡಿಯ ಮೂಲ ಮನೆಯಲ್ಲಿ ಹರೀಶ್ ರಾಯ್ ಅಂತಿಮ ವಿಧಿವಿಧಾನ

- Advertisement -
- Advertisement -

ಉಡುಪಿ; ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ಹರೀಶ್ ರಾಯ್ (55) ಅವರು ನಿನ್ನೆ ವಿಧಿವಶರಾಗಿದ್ದಾರೆ. ಮೂಲತಃ ಉಡುಪಿಯವರಾದ ಹರೀಶ್ ರಾಯ್ ಅವರ ಮುಲ ಹೆಸರು ಹರೀಶ್ ಆಚಾರ್ಯ. ಹರೀಶ್ ಅವರ ಅಂತ್ಯಸಂಸ್ಕಾರ ಉಡುಪಿಯ ಬೀಡಿನಗುಡ್ಡೆಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಿತು.

ಮೊದಲು ಉಡುಪಿಯ ಅಂಬಲಪಾಡಿಯ ಮೂಲ ಮನೆಯಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ತುಳಸಿ ಕಟ್ಟೆ ಮುಂಭಾಗದಲ್ಲಿ ಅರ್ಚಕರ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನಗಳು ನಡೆದವು. ಹರೀಶ್ ಆಚಾರ್ಯ ಆಪ್ತರು ಕುಟುಂಬದವರು ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾದರು. ಬಳಿಕ ಕುಟುಂಬಸ್ಥರು, ಆಪ್ತರು, ಅಭಿಮಾನಿಗಳು ಪಾರ್ಥಿವ ಶರೀರದ ಅಂತಿಮ‌ ದರ್ಶನ ಪಡೆದರು. ಬಳಿಕ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ನಟ ಹರೀಶ್ ರಾಯ್ ಮೃತದೇಹಕ್ಕೆ ಸಹೋದರ ಸತೀಶ್ ಹಾಗೂ ಪುತ್ರರಾದ ರೋನೆತ್ ರಾಯ್, ರೋಷನ್ ರಾಯ್ ಅಗ್ನಿಸ್ಪರ್ಶ ಮಾಡಿದರು.

- Advertisement -

Latest News

error: Content is protected !!