- Advertisement -
- Advertisement -
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ಜನತಾ ಕಾಲೋನಿಗೆ ಮಹಾಮಾರಿ ಕೊರೋನಾ ಆವರಿಸಿ, ಒಂದು ಪಾಸಿಟಿವ್ ಪ್ರಕರಣ ಧೃಡ ಪಟ್ಟ ನಂತರ ಆ ಪ್ರದೇಶದ ಸುಮಾರು 88 ಕುಟುಂಬಗಳನ್ನು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ನಿನ್ನೆ ಆ ಪ್ರದೇಶಕ್ಕೆ ಭೇಟಿ ನೀಡಿದ ಬೆಳ್ತಂಗಡಿ ತಾಲೂಕಿನ ಭರವಸೆಯ ಶಾಸಕ ಹರೀಶ್ ಪೂಂಜ ಅವರು ಗ್ರಾಮ ಪಂಚಾಯತ್ ಅಧ್ಯಕ್ಷರಲ್ಲಿ ಏನಾದರೂ ತೊಂದರೆ ಇದ್ದರೆ ತಿಳಿಸಿ ಎಂದಾಗ ಇಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧ್ಯಕ್ಷರು ತಿಳಿಸಿದ ಕೂಡಲೇ ಸ್ಪಂದಿಸಿದ ಶಾಸಕರು ಬೋರ್ ವೆಲ್ ತೆಗೆಸಿ ಇವತ್ತು ಸಂಜೆಯೊಳಗೆ ಈ ಪರಿಸರದ ನೀರಿನ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದರು.
ಅವರು ಹೇಳಿದಂತೆ ಸಂಜೆ ಬೋರ್ ವೆಲ್ ತೆಗೆಸಿದಾಗ ಅದರಲ್ಲಿ ಸುಮಾರು 4 ಇಂಚ್ ನಷ್ಟು ನೀರು ಸಿಕ್ಕಿದ್ದು .ನಮ್ಮ ನೀರಿನ ಭವಣೆಯನ್ನು ನೀಗಿಸಿ ಕೊಟ್ಟ ಮಾತಿನಂತೆ ನಡೆದುಕೊಂಡ ಶಾಸಕರಿಗೆ ಪರಿಸರ ಜನತೆ ಕೃತಜ್ಞತೆ ಸಲ್ಲಿಸಿದರು.
- Advertisement -