Saturday, December 14, 2024
Homeಕರಾವಳಿಉಪ್ಪಿನಂಗಡಿ: ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ವಿತರಿಸಿದ ಪೊಲೀಸ್ ಸಿಬ್ಬಂದಿ

ಉಪ್ಪಿನಂಗಡಿ: ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ವಿತರಿಸಿದ ಪೊಲೀಸ್ ಸಿಬ್ಬಂದಿ

spot_img
- Advertisement -
- Advertisement -

ಉಪ್ಪಿನಂಗಡಿ, ಎ.4: ಲಾಕ್‍ಡೌನ್‍ನಿಂದಾಗಿ ಆಹಾರ ಸಾಮಗ್ರಿಗಳಿಲ್ಲದೆ ಸಂಕಷ್ಟದಲ್ಲಿದ್ದ ತನ್ನ ಬೀಟ್ ವ್ಯಾಪ್ತಿಯ ಬಡ ಐದು ಕುಟುಂಬಗಳಿಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಸಂಗಯ್ಯ ಕಾಳೆಯವರು ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಸಂಗಯ್ಯ ಕಾಳೆಯವರು ಬಜತ್ತೂರು ಗ್ರಾಮದ ಬೀಟ್ ಪೊಲೀಸ್ ಆಗಿದ್ದು, ತನ್ನ ಗ್ರಾಮದ ಐದು ಬಡ ಕುಟುಂಬಗಳು ಲಾಕ್‍ಡೌನ್‍ನ ಅವಧಿಯಲ್ಲಿ ಸಂಕಷ್ಟದಿಂದಿರುವುದನ್ನು ಅರಿತು ಅವರಿಗೆ ಕೆಲ ದಿನಗಳಿಗೆ ಬೇಕಾಗುವಷ್ಟು ಅಕ್ಕಿ, ಮೆಣಸು ಸೇರಿದಂತೆ ಇತರೆ ದಿನಸಿ ಸಾಮಗ್ರಿಗಳು ಹಾಗೂ ತರಕಾರಿಗಳನ್ನು ತನ್ನ ವತಿಯಿಂದ ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದರು. ತನ್ನ ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸ್ ಸಿಬ್ಬಂದಿಯೋರ್ವರ ಈ ಮಾನವೀಯ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಈ ಸಂದರ್ಭ ಬಜತ್ತೂರು ಗ್ರಾ.ಪಂ. ಸದಸ್ಯ ಮಾಧವ ಪೂಜಾರಿ ಒರುಂಬೋಡಿ ಉಪಸ್ಥಿತರಿದ್ದರು

(ಜನರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ವರದಿಯನ್ನು ನಿಮ್ಮ “ಮಹಾ ಎಕ್ಸ್​ಪ್ರೆಸ್” ನಲ್ಲಿ​​ ಪ್ರಕಟಿಸುತ್ತಿದ್ದೇವೆ. ನಿಮ್ಮೂರಿನಲ್ಲೂ ಇಂತಹ ಕಾರ್ಯ ಮಾಡಿದ್ದರೆ +91 91378 26338 ನಂಬರ್ ಗೆ ವಾಟ್ಸಾಪ್ ನಲ್ಲಿ ಮಾಹಿತಿ ನೀಡಿ-ಸಂಪಾದಕರು)

- Advertisement -
spot_img

Latest News

error: Content is protected !!