Sunday, May 5, 2024
Homeಕರಾವಳಿಶಾಸಕ ಹರೀಶ್ ಪೂಂಜ ಮತ್ತು ಜಿಲ್ಲಾಡಳಿತದ ಶ್ರಮದಿಂದ ನಿಪ್ಪಾಣಿಯಲ್ಲಿ ಸಿಲುಕಿದ್ದ ಕರಾವಳಿಗರು ಊರಿಗೆ

ಶಾಸಕ ಹರೀಶ್ ಪೂಂಜ ಮತ್ತು ಜಿಲ್ಲಾಡಳಿತದ ಶ್ರಮದಿಂದ ನಿಪ್ಪಾಣಿಯಲ್ಲಿ ಸಿಲುಕಿದ್ದ ಕರಾವಳಿಗರು ಊರಿಗೆ

spot_img
- Advertisement -
- Advertisement -

ಬೆಳ್ತಂಗಡಿ:ಮುಂಬೈ ನ ಮಹಿಳಾ ಏಜೆಂಟ್ ಒಬ್ಬರ ವಂಚನೆಯಿಂದ ಪಾಸ್ ಇಲ್ಲದೆ ಮುಂಬೈನಿಂದ ಹೊರಟು ಕರಾವಳಿಗೆ ಆಗಮಿಸುತ್ತಿದ್ದ ಏಳು ತಿಂಗಳ ಗರ್ಭಿಣಿ, 10 ತಿಂಗಳ ಮಗು ಸೇರಿದಂತೆ ಸುಮಾರು 32 ಮಂದಿ ಬೆಳಗಾವಿಯ ನಿಪ್ಪಾಣಿಯಲ್ಲಿ ಸಂಕಷ್ಟ ಪಡುತ್ತಿದ್ದರು.

ಲಾಕ್ ಡೌನ್ ಸಮಯದಲ್ಲಿ ಮುಂಬೈನಲ್ಲಿ ಸಂಕಷ್ಟಕ್ಕೀಡಾಗಿದ್ದ ಒಂದಷ್ಟು ತುಳುನಾಡು ಮೂಲದ ಕನ್ನಡಿಗರು ಮಹಿಳಾ ಏಜೆಂಟ್ ಒಬ್ಬರ ಸಹಾಯದಿಂದ ಟಿಕೆಟ್ ಬುಕ್ ಮಾಡಿ ಹಣ ಪಾವತಿಸಿ ಮುಂಬೈನಿಂದ ದಕ್ಷಿಣ ಕನ್ನಡ ಮತ್ತು ಉಡುಪಿಗೆ ಹೊರಟಿದ್ದರು. ಸ್ವತಃ ಎಜೆಂಟರ್ ತಾನು ಸೇವಾ ಸಿಂಧೂ ಮೂಲಕ ಪಾಸ್ ಪಡೆದಿರುವ ಬಗ್ಗೆ ಪ್ರಯಾಣಿಕರಿಗೆ ತಿಳಿಸಿದ್ದಳು. ಬಳಿಕ ಮುಂಬೈನಿಂದ ಹೊರಟಿದ್ದ ಬಸ್ ಬೆಳಗಾವಿಯ ನಿಪ್ಪಾಣಿ ಟೋಲ್ ಗೇಟ್ ಸಮೀಪ ತಲುಪುತ್ತಿದ್ದಂತೆ ಬಸ್ ತಡೆಯಲಾಗಿದೆ. ಈ ಸಂದರ್ಭದಲ್ಲಿ ಸೇವಾ ಸಿಂಧೂ ಆಪ್ ನಲ್ಲಿ ನೋಂದಣಿ ಮಾಡಿರುವ ಪಾಸ್ ಬಗ್ಗೆ ವಿಚಾರಿಸಿದಾಗ. ಪಾಸ್ ಇಲ್ಲ ಎಂದು ಚಾಲಕ ತಿಳಿಸಿದ್ದಾನೆ. ಇದರಿಂದಾಗಿ ಟೋಲ್ ಗೇಟ್ ನಲ್ಲಿ ಬಸ್ ತಡೆಯಲಾಗಿದೆ.

ಯಾರೋ ಮಾಡಿದ ತಪ್ಪಿಗೆ ಬಲಿಯಾಗಿ ಕಳೆದ ಎರಡು ದಿನಗಳಿಂದ ನಿಪ್ಪಾಣಿಯಲ್ಲಿ ಸಿಲುಕಿ ಹಾಕಿಕೊಂಡಿದ್ದವರ ಸುದ್ದಿ ತಿಳಿದ ತಕ್ಷಣ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿ, ಅಲ್ಲಿರುವ ಜನರ ಸಮಸ್ಯೆಗಳ ಕುರಿತಾಗಿ ಮನವರಿಕೆ ಮಾಡಿಕೊಟ್ಟಿದ್ದರು.

ಜತೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸುದ್ದಿ ಮುಟ್ಟಿಸಿದ್ದಾರೆ. ಸಚಿವರು ಬೆಳಗಾವಿ, ಉಡುಪಿ, ದ.ಕ. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರೂ ಕೂಡ ಸಚಿವರಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
ಇದೀಗ ಶಾಸಕರು, ಸಚಿವರು ಮತ್ತು ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ಸಂಕಷ್ಟದಲ್ಲಿದ್ದವರು ಇದೀಗ ಊರಿಗೆ ಮರಳುತ್ತಿದ್ದಾರೆ.

ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಕಾರ್ಯಕ್ಕೆ ಪ್ರಯಾಣಿಕರು ಅಭಾರಿಯಾಗಿದ್ದಾರೆ.

- Advertisement -
spot_img

Latest News

error: Content is protected !!