Friday, May 17, 2024
Homeಕರಾವಳಿನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ರಾಜ್ಯ ರಾಜಧಾನಿ ಬೆಂಗಳೂರು

ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ರಾಜ್ಯ ರಾಜಧಾನಿ ಬೆಂಗಳೂರು

spot_img
- Advertisement -
- Advertisement -

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 1-30 ರ ಸುಮಾರಿಗೆ ನಿಗೂಢ ಶಬ್ದ ಕೇಳಿ ಬಂದಿದ್ದು, ಇದರ ಮೂಲ ಇನ್ನೂ ಪ್ರಶ್ನಾರ್ಥಕವಾಗಿದೆ. ಈ ಭಯಾನಕ ಶಬ್ದ ಅರ್ಧ ಬೆಂಗಳೂರಿಗೆ ಕೇಳಿದೆ ಎನ್ನಲಾಗುತ್ತಿದ್ದು, ಇದರ ಮೂಲವನ್ನು ಈಗ ಹುಡುಕಲಾಗುತ್ತಿದೆ.

ಕೋರಮಂಗಲ, ಹೆಚ್.ಎಸ್.‌ಆರ್.‌ ಲೇಔಟ್, ಜೆ.ಪಿ. ನಗರ, ಮಾರತ್ ಹಳ್ಳಿ, ಜಯನಗರ ಹೀಗೆ ಬೆಂಗಳೂರಿನ ಬಹುತೇಕ ಕಡೆ ಈ ಭೀಕರ ಸದ್ದು ಕೇಳಿ ಬಂದಿದೆ.‌ ಮೊದಲೇ ಕೊರೊನಾ ಆರ್ಭಟಕ್ಕೆ ಬೆಚ್ಚಿಬಿದ್ದಿರುವ ಬೆಂಗಳೂರಿನ ಜನತೆ ಈ ನಿಗೂಢ ಸದ್ದಿಗೆ ಮತ್ತಷ್ಟು ಆತಂಕಿತರಾಗಿದ್ದಾರೆ.

ಟ್ರಾನ್ಸ್‌ ಫಾರ್ಮರ್‌ ಸಿಡಿದಿರಬಹುದೆಂದು ಭಾವಿಸಲಾಗಿತ್ತಾದರೂ ಆದರೆ ಅದರ ಸದ್ದು ಬಾಂಬ್‌ ಬ್ಲಾಸ್ಟ್‌ ಆದಂತಿತ್ತು ಎನ್ನಲಾಗಿದೆ. ಹೀಗಾಗಿ ಎಲ್ಲಿಂದ ಶಬ್ದ ಕೇಳಿ ಬಂದಿದೆ ಎಂಬುದನ್ನು ಕಂಡು ಹಿಡಿಯಲಾಗುತ್ತಿದೆ.

- Advertisement -
spot_img

Latest News

error: Content is protected !!