Wednesday, June 24, 2026
Homeಮನರಂಜನೆಹರಿಪ್ರಿಯ ಮತ್ತು ವಸಿಷ್ಠ ಸಿಂಹ ಹಸೆಮಣೆ ಏರಲು ಮುಹೂರ್ತ ಫಿಕ್ಸ್

ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಹಸೆಮಣೆ ಏರಲು ಮುಹೂರ್ತ ಫಿಕ್ಸ್

- Advertisement -
- Advertisement -

ಬೆಂಗಳೂರು:  ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಹಸೆಮಣೆ ಏರಲು ಮುಹೂರ್ತ ಫಿಕ್ಸ್ ಆಗಿದೆ. ಗುರುಹಿರಿಯರ ಸಮ್ಮುಖದಲ್ಲಿ ಇದೇ ಜನವರಿ 26ರಂದು ಮೈಸೂರಿನಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ.

ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಇರಲಿದೆ. ಇನ್ನು ಲಾಕ್ ಡೌನ್ ಇವರ ಪ್ರೀತಿಗೆ ಒಂದು ದೊಡ್ಡ ಸೇತುವೆಯಂತೆ. ಅಷ್ಟೆ ಅಲ್ಲ ಹರಿಪ್ರಿಯ ತಂದೆಯ ಕಾರ್ಯದ ದಿನವೇ ಹರಿಪ್ರಿಯಾಗೆ ಸಿಂಹ ಪ್ರಪೋಸ್ ಮಾಡಿದ್ದರಂತೆ. ಅಂದಿನಿಂದಲೇ ಇವರ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಿದೆ.

ಇನ್ನು ಇಬ್ಬರ ಒಂದಿಷ್ಟು ಕಾಮನ್ ವಿಚಾರಗಳು ಕೂಡ ಇವರ ಪ್ರೀತಿ ಬಂಧನ ಹೆಚ್ಚು ಆಗೋದಿಕ್ಕೆ ಕಾರಣವಾಯ್ತಂತೆ. ಇನ್ನು ಹರಿಪ್ರಿಯ ಸಿನಿಮಾಗಳು, ಅವರ ನಟನೆಗೆ ಮನಸೋತರಂತೆ ವಸಿಷ್ಠ. ಇನ್ನು ಹರಿ ಪ್ರಿಯ ಅವರ ಗುಣಕ್ಕೆ ನಾನು ಮಾರು ಹೋಗಿದ್ದೇನೆ ಎಂದು ಹೇಳಿದ್ದಾರೆ ಸಿಂಹ. ಮದುವೆಯಾದ ಮೇಲೆ ಒಂದು ಚಿಕ್ಕ ಬ್ರೇಕ್ ತೆಗೆದುಕೊಳ್ತೀನಿ. ನಂತರ ಒಳ್ಳೆಯ ಸ್ಕ್ರಿಪ್ಟ್ ಬಂದರೆ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದಾರೆ ಹರಿಪ್ರಿಯ.

- Advertisement -

Latest News

error: Content is protected !!