Sunday, April 6, 2025
Homeತಾಜಾ ಸುದ್ದಿಹಿಂದಿಯಲ್ಲಿ ಮಾತನಾಡಿ ತಂದೆ ತಾಯಿಗೆ ಕಿರುಕುಳ: ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಿರುದ್ಧ ನಟ ಸಿದ್ದಾರ್ಥ್‌...

ಹಿಂದಿಯಲ್ಲಿ ಮಾತನಾಡಿ ತಂದೆ ತಾಯಿಗೆ ಕಿರುಕುಳ: ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಿರುದ್ಧ ನಟ ಸಿದ್ದಾರ್ಥ್‌ ಆರೋಪ

spot_img
- Advertisement -
- Advertisement -

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡಿ ತಂದೆ-ತಾಯಿಗೆ 20 ನಿಮಿಷ ಕಿರುಕುಳ ನೀಡಿದ್ರು ಎಂದು ದಕ್ಷಿಣ ಭಾರತದ ಹೆಸರಾಂತ ನಟ ಸಿದ್ದಾರ್ಥ್ ಆರೋಪ ಮಾಡಿದ್ದಾರೆ.

ಮಧುರೈ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಿಂದ 20 ನಿಮಿಷ ಕಿರುಕುಳ ಆಯಿತು. ನನ್ನ ವಯಸ್ಸಾದ ತಂದೆ-ತಾಯಿಯ ಬ್ಯಾಗ್ನಿಂದ ಕಾಯಿನ್ಗಳನ್ನು ತೆಗೆಸಿದರು. ಇಂಗ್ಲಿಷ್ನಲ್ಲಿ ಮಾತನಾಡಿ ಎಂದು ಹೇಳಿದರೂ ಕೂಡ ಪದೇ ಪದೇ ಹಿಂದಿಯಲ್ಲಿ ಮಾತನಾಡಿದರು. ಅದನ್ನು ನಾವು ವಿರೋಧಿಸಿದಾಗ ಭಾರತದಲ್ಲಿ ಹೀಗೆಯೇ ಇರುವುದು ಅಂತ ಹೇಳಿದ್ರು. ಕೆಲಸ ಇಲ್ಲದ ಜನ ಅಧಿಕಾರದ ದರ್ಪ ತೋರುತ್ತಿದ್ದಾರೆ’ ಎಂದು ಸಿದ್ದಾರ್ಥ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದೀಗ ಹಿಂದಿ ಹೇರಿಕೆ ಕುರಿತ ಚರ್ಚೆಗೆ ಇದರಿಂದಾಗಿ ಮತ್ತೆ ಪುಷ್ಟಿ ಸಿಕ್ಕಂತೆ ಆಗಿದೆ.

- Advertisement -
spot_img

Latest News

error: Content is protected !!