Saturday, June 6, 2026
Homeತಾಜಾ ಸುದ್ದಿಮಂಗಳೂರು: ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದ ನರ್ಸ್ ನಾಪತ್ತೆ

ಮಂಗಳೂರು: ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದ ನರ್ಸ್ ನಾಪತ್ತೆ

- Advertisement -
- Advertisement -

ಮಂಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಾಪತ್ತೆಯಾಗಿರುವ ಯುವತಿ ಸುಸನ್ನ ಡಿಕೋಸ್ತ(24) ಎಂದು ಹೇಳಲಾಗಿದೆ. ಯುವತಿ ಎಂದಿನoತೆ ತನ್ನ ಹಾಸ್ಟೆಲಿನಿಂದ ಆಸ್ಪತ್ರೆಗೆ ಕೆಲಸಕ್ಕೆ ಹೋಗಿ ಸಂಜೆ ಹಿಂತಿರುಗುವಾಗ ಆಸ್ಪತ್ರೆಯ ರಿಜಿಸ್ಟರ್ ಬುಕ್ ನಲ್ಲಿ
4.15ಸಮಯಕ್ಕೆ ನಾನು ಮನೆಗೆ ಹಿಂತಿರುಗಿದ್ದೇನೆ ಎಂದು ನಮೂದಿಸಿ ಮನೆಗೂ ಬಾರದೆ ಹಾಸ್ಟೆಲ್ ಗೂ ತೆರಳದೆ ಕಾಣೆಯಾಗಿದ್ದಾರೆ.

ಯುವತಿ ವಿವರ: ಸುಸನ್ನ ಡಿಕೋಸ್ತ 5.2 ಅಡಿ ಎತ್ತರವಿದ್ದು, ಕೊಂಕಣಿ, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಗೋಧಿ ಮೈಬಣ್ಣ, ಉದ್ದನೆಯ ಮುಖ, ಸಪೂರ ಶರೀರ ಹೊಂದಿದ್ದು ಕಪ್ಪು ಜೀನ್ಸ್ ಪ್ಯಾಂಟ್ ಮತ್ತು ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದರು. ಈಕೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಬರ್ಕೆ ಠಾಣೆಗೆ ತಿಳಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!