Saturday, June 27, 2026
HomeUncategorizedಚಾಮರಾಜನಗರ: ಸೇತುವೆಯಿಂದ ಕೆಳಗೆ ಬಿದ್ದ ಸರ್ಕಾರಿ ಬಸ್; ಪ್ರಯಾಣಿಕರ ಸ್ಥಿತಿ ಗಂಭೀರ

ಚಾಮರಾಜನಗರ: ಸೇತುವೆಯಿಂದ ಕೆಳಗೆ ಬಿದ್ದ ಸರ್ಕಾರಿ ಬಸ್; ಪ್ರಯಾಣಿಕರ ಸ್ಥಿತಿ ಗಂಭೀರ

- Advertisement -
- Advertisement -

ಚಾಮಾರಾಜನಗರ: ಚಾಮರಾಜನಗರದಲ್ಲಿ ಕೆಎಸ್ ಅರ್ ಟಿಸಿ ಬಸ್ ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಒಬ್ಬ ಪ್ರಯಾಣಿಕ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಕೊಳ್ಳೆಗಾಲದಿಂದ ಪಿ.ಜಿ. ಪಾಳ್ಯಕ್ಕೆ ಹೋಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕುಡುವಾಳೆ ಬಳಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಘಟನೆಯಲ್ಲಿ 70 ವರ್ಷದ ವೃದ್ಧೆ ಶಿವಮ್ಮ ಮೃತಪಟ್ಟಿದ್ದರೆ, 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


ಮೃತರನ್ನು ಪಿ.ಜಿ.ಪಾಳ್ಯ ಗ್ರಾಮದ ಶಿವಮ್ಮ(50) ಎಂದು ಗುರುತಿಸಲಾಗಿದೆ. ಈ ಸ್ಥಳೀಯರು ಬಸ್ ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!