Wednesday, June 26, 2024
Homeಕರಾವಳಿತೆಂಗಿನಕಾಯಿ ತೆಗೆಯುವ ಸಮಯದಲ್ಲಿ ಕಣಜ ಹುಳುಗಳ ದಾಳಿಗೆ ಯುವಕ ಸಾವು

ತೆಂಗಿನಕಾಯಿ ತೆಗೆಯುವ ಸಮಯದಲ್ಲಿ ಕಣಜ ಹುಳುಗಳ ದಾಳಿಗೆ ಯುವಕ ಸಾವು

spot_img
- Advertisement -
- Advertisement -

ಗುರುಪುರ: ಕಣಜದ ಹುಳುಗಳ ದಾಳಿಯಿಂದ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ ಎಡಪದವಿನ ಪಟ್ಲಚ್ಚಿಲ್ ಎಂಬಲ್ಲಿ ನಡೆದಿದೆ. ಪಟ್ಲಚ್ಚಿಲ್ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ದಂಪತಿ ಪುತ್ರ, ಎಂಸಿಎಫ್​ನಲ್ಲಿ ಎಸಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ (24) ಮೃತ ದುರ್ದೈವಿ.

ಕೇಶವ ಅವರು ಮನೆಯ ತೆಂಗಿನ ಕಾಯಿ ಕೀಳಲು ತಾನು ಹೊಸದಾಗಿ ಖರೀದಿಸಿದ್ದ ಯಂತ್ರ ಬಳಸಿಕೊಂಡು ಭಾನುವಾರ ನೆರೆಮನೆಯವರ ತೆಂಗಿನ ಮರದಿಂದ ಕಾಯಿ ಕೀಳಲು ಹತ್ತಿದ್ದಾರೆ. ಮರವೇರಿದ ಸಂದರ್ಭ ಮರದಲ್ಲಿದ್ದ ಕಣಜದ ಹುಳುವಿನ ಗೂಡಿಗೆ ಕೇಶವರ ತಲೆ ತಾಗಿತ್ತು. ಈ ಸಂದರ್ಭ ಏಕಾಏಕಿಯಾಗಿ ಹುಳುಗಳು ದಾಳಿ ಮಾಡಿದ್ದವು. ಅವರ ಮೈಮೇಲೆ 70ಕ್ಕೂ ಹೆಚ್ಚು ಕಡೆ ಗಾಯಗಳಾಗಿವೆ.

ತಕ್ಷಣ ಮೂಡುಬಿದಿರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ವಿವಾಹಿತರಾಗಿದ್ದ ಅವರು ಮೂವರು ಸಹೋದರರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!