Friday, May 3, 2024
Homeಕರಾವಳಿಉಡುಪಿಹಬ್ಬಗಳಿಗೆ ಮತ್ತೆ ಎದುರಾಯ್ತು ನಿರ್ಬಂಧ: ಗಣೇಶೋತ್ಸವ ಹಾಗೂ ಮೊಹರಂ ಆಚರಣೆಗೆ ಹೊಸ ಮಾರ್ಗಸೂಚಿ ಪ್ರಕಟ!

ಹಬ್ಬಗಳಿಗೆ ಮತ್ತೆ ಎದುರಾಯ್ತು ನಿರ್ಬಂಧ: ಗಣೇಶೋತ್ಸವ ಹಾಗೂ ಮೊಹರಂ ಆಚರಣೆಗೆ ಹೊಸ ಮಾರ್ಗಸೂಚಿ ಪ್ರಕಟ!

spot_img
- Advertisement -
- Advertisement -

ಮಂಗಳೂರು: ಕೊರೊನಾ ಮೂರನೇ ಅಲೆ ತಡೆಗೆ ಕಠಿಣ ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು,ಗಣಪತಿ ಹಬ್ಬ ಮತ್ತು ಮೊಹರಂ ಆಚರಣೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಹೊಸ ಮಾರ್ಗಸೂಚಿಯಲ್ಲಿ ಪೆಂಡಾಲ್ ಹಾಕಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ.ಗಣಪತಿ ವಿಸರ್ಜನೆ ಮಾಡುವಾಗ ಮೆರವಣಿಗೆ ನಡೆಸುವಂತಿಲ್ಲ, ಗಣಪತಿ ಹಬ್ಬ ಆಚರಿಸುವ ದೇವಾಲಯಗಳಲ್ಲಿ ನಿತ್ಯವೂ ಸ್ಯಾನಿಟೈಸೇಶನ್ ಮಾಡಬೇಕು.


ಮಾರ್ಗಸೂಚಿಯ ಅಂಶಗಳು ಹೀಗಿವೆ:

ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಹತ್ತಿರದ ದೇವಾಲಯಗಳು ಅಥವಾ ಮನೆಗಳಲ್ಲಿ ಸ್ಥಾಪಿಸಬೇಕು.ಆಯೋಜಕರು ಪೆಂಡಾಲ್ ಗಳನ್ನು ಹಾಕಿ, ರಸ್ತೆಗಳಲ್ಲಿ ಮೂರ್ತಿಗಳನ್ನು ಸ್ಥಾಪನೆ ಮಾಡುವಂತಿಲ್ಲ.

ಕೋವಿಡ್ ಸೋಂಕಿನ ಮೂರನೇ ಅಲೆಯ ಭೀತಿ ಇರುವುದರಿಂದ ಯಾವುದೇ ರೀತಿಯ ಬಣ್ಣ, ಡಾಲ್ಟಿ, ಪಟಾಕಿಗಳನ್ನು ಸಿಡಿಸದೇ ಸರಳವಾಗಿ ಹಬ್ಬ ಆಚರಣೆ ಮಾಡಬೇಕು.ದೇವಸ್ಥಾನಗಳಲ್ಲಿ ಸ್ಥಾಪನೆ ಮಾಡುವ ಮೂರ್ತಿ 4 ಅಡಿ ಹಾಗೂ ಮನೆಗಳಲ್ಲಿ ಸ್ಥಾಪಿಸುವ ಮೂರ್ತಿಗಳು 2 ಅಡಿಗಿಂತ ಎತ್ತರ ಇರಬಾರದು. ಜತೆಗೆ ಪಿಓಪಿ ಬದಲಾಗಿ ಮಣ್ಣನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿಗಳು ಸ್ಥಾಪನೆ ಮಾಡಬೇಕು.

ಗಣೇಶ ಆಚರಣೆಗೆ ಪಾಲಿಕೆ, ಪೊಲೀಸ್, ಸ್ಥಳೀಯ ವಿದ್ಯುತ್ ನಿಗಮ, ಮಾಲಿನ್ಯ ನಿಯಂತ್ರಣ, ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯಗೊಳಿಸಲಾಗಿದೆ.ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರೋ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಬೇಕು. ಇಲ್ಲವೇ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಪಡಿಸಿದ ಮೊಬೈಲ್ ಟ್ಯಾಂಕ್ ನಲ್ಲಿ ವಿಸರ್ಜನೆ ಮಾಡಬೇಕು.

ಗಣೇಶ ಹಬ್ಬದ ಜೊತೆ ಜೊತೆಗೆ ಮೊಹರಂ ಹಬ್ಬಕ್ಕೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಆಲಂ/ಪಂಜಾ ಮತ್ತು ತಾಜಿಯತ್ ಗಳನ್ನು ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೊಹರಂ ಪ್ರಾರ್ಥನಾ ಸಭೆ, ಮೆರವಣಿಗೆ ನಿಷೇಧಿಸಲಾಗಿದೆ. ಸೂಕ್ತ ದೈಹಿಕ ಅಂತರ ಪಾಲಿಸಬೇಕಿದೆ. ಕನಿಷ್ಠ ಮಂದಿ ಮಾತ್ರ ಪ್ರಾರ್ಥನೆಯಲ್ಲಿ ಭಾಗಿಯಾಗಬೇಕು. ಸಂಖ್ಯೆಯ ಜನರುಆಲಂ/ಪಂಜಾ ಮತ್ತು ತಾಜಿಯತ್ ಗಳನ್ನು ಮುಟ್ಟುವಂತಿಲ್ಲ.

ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರು ಮನೆಯೊಳಗೆ ಇರಬೇಕು. ಪ್ರಾರ್ಥನೆಯ ಸಂದರ್ಭದಲ್ಲಿ ಕನಿಷ್ಠ 6 ಅಡಿ ದೈಹಿಕ ಅಂತರ ಕಡ್ಡಾಯವಾಗಿರುತ್ತದೆ. ಮಸೀದಿಗಳನ್ನು ಹೊರತುಪಡಿಸಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದೆ. ಸಭಾಂಗಣ ಮತ್ತು ಸಮುದಾಯ ಭವನಗಳಲ್ಲಿ ಪ್ರಾರ್ಥನೆಗೆ ನಿರ್ಬಂಧವಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

- Advertisement -
spot_img

Latest News

error: Content is protected !!