Thursday, April 25, 2024
Homeತಾಜಾ ಸುದ್ದಿಆಗಸ್ಟ್ 15ರಿಂದ ಗೃಹ ಲಕ್ಷ್ಮೀ ಯೋಜನೆ ಜಾರಿ ಖಚಿತ; BPL ಹಾಗೂ  APL Card ಕುಟುಂಬದ ಯಜಮಾನಿ...

ಆಗಸ್ಟ್ 15ರಿಂದ ಗೃಹ ಲಕ್ಷ್ಮೀ ಯೋಜನೆ ಜಾರಿ ಖಚಿತ; BPL ಹಾಗೂ  APL Card ಕುಟುಂಬದ ಯಜಮಾನಿ ಅಕೌಂಟ್ ಗೆ 2000 ಬೀಳೋದು ನಿಶ್ಚಿತ

spot_img
- Advertisement -
- Advertisement -

ಬೆಂಗಳೂರು: ಆಗಸ್ಟ್ 15ರಿಂದ ಗೃಹ ಲಕ್ಷ್ಮೀ ಯೋಜನೆಯಡಿ  ರಾಜ್ಯದ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರ ಪ್ರತಿಯೊಂದು ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ವರ್ಗಾವಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಇಂದು  ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯೋಜನೆ ಘೋಷಣೆ ಮಾಡಿದರು. ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಆದರೆ, ಇದಕ್ಕೆ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್​ ಒದಗಿಸಬೇಕಾಗುತ್ತದೆ. ಮನೆಯ ಯಜಮಾನಿ ಯಾರು ಎಂಬುದರ ಮಾಹಿತಿಯನ್ನೂ ಒದಗಿಸಬೇಕಾಗುತ್ತದೆ. ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ತಿಂಗಳಿಗೆ 2000 ವರ್ಗಾವಣೆ ಮಾಡುತ್ತೇವೆ ಎಂದು ನಾವು ಹೇಳಿದ್ದೆವು. ಹೀಗಾಗಿ ಯಜಮಾನಿಯ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.

ಗೃಹ ಲಕ್ಷ್ಮೀ ಯೋಜನೆಯ ಮಲಕ ಹಣ ಪಡೆಯೋದು ಹೇಗೆ?

  • ಜೂನ್ 15ರಿಂದ ಜುಲೈ 15ರ ಒಳಗೆ ಅರ್ಜಿ ನೀಡಬೇಕು.
  • ಆನ್​ಲೈನ್ ಮೂಲಕ ಅರ್ಜಿಗಳನ್ನು ತಲುಪಿಸಬೇಕು.
  • ಜುಲೈ 15ರಿಂದ ಆಗಸ್ಟ್ 15 ರ ಒಳಗೆ ಅರ್ಜಿಗಳನ್ನು ಪರಿಶೀಲಿಸಿ ಆಗಸ್ಟ್ 15ರಂದು ಯೋಜನೆ ಜಾರಿಗೊಳಿಸುತ್ತೇವೆ.
  • ಅರ್ಜಿಯಲ್ಲಿ ಕೊಟ್ಟ ಮಾಹಿತಿಯ ಆಧಾರದಲ್ಲಿ ಯೋಜನೆ ಜಾರಿಗೊಳಿಸಲಾಗುವುದು
  • ಪರಿಶೀಲನೆ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುವುದರಿಂದ ಈ ತಿಂಗಳಿನಿಂದಲೇ ಜಾರಿಗೆ ತರಲಾಗದು

- Advertisement -
spot_img

Latest News

error: Content is protected !!