Thursday, June 4, 2026
Homeಕರಾವಳಿಉಪ್ಪಿನಂಗಡಿ: ಬೈಕ್ ಅಡ್ಡಗಟ್ಟಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ತಂಡ; ಮೂವರು ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಬೈಕ್ ಅಡ್ಡಗಟ್ಟಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ತಂಡ; ಮೂವರು ಆಸ್ಪತ್ರೆಗೆ ದಾಖಲು

- Advertisement -
- Advertisement -

ಉಪ್ಪಿನಂಗಡಿ: ಇಲ್ಲಿನ ಇಳಂತಿಲದಲ್ಲಿ ಬೈಕೊಂದನ್ನು ಅಡ್ಡಗಟ್ಟಿ ಎಲೆಕ್ನಿಷಿಯನ್ ಒಬ್ಬರಿಗೆ ತಂಡ ವೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ.


ಘಟನೆಗೆ ಸಂಬಂಧಿಸಿ ಇತ್ತಂಡದ ಮೂವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದವರ ಪೈಕಿ ಬೈಕ್ ಸವಾರ ಎಲೆಕ್ನಿಷಿಯನ್ ಇಳಂತಿಲ ಎಣಾಡಿ ನಿವಾಸಿ ಮಂಜುನಾಥ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಮಂಜು ನಾಥ್ ಅವರು ಮನೆಗೆ ಬಂದು ಬೈಕ್ ನಲ್ಲಿ ಪೇಟೆಗೆ ಹೋಗಿ ಮತ್ತೆ ಮನೆಗೆ ಹಿಂದಿರುಗುವಾಗ ಇಳಂತಿಲ ಬಳಿ ನಾಲೈದು ಮಂದಿ ಬೈಕ್ ಅನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ಪೈಕಿ ಸ್ವಸ್ತಿಕ್ ಎಂದು ಗುರುತಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

- Advertisement -

Latest News

error: Content is protected !!