Tuesday, June 9, 2026
Homeಕರಾವಳಿಶಾರ್ಟ್ ಸರ್ಕ್ಯೂಟ್‌ನಿಂದ ದಿನಸಿ ಅಂಗಡಿಗೆ ಬೆಂಕಿ; ಲಕ್ಷ್ಮಾಂತರ ರೂ ನಷ್ಟ

ಶಾರ್ಟ್ ಸರ್ಕ್ಯೂಟ್‌ನಿಂದ ದಿನಸಿ ಅಂಗಡಿಗೆ ಬೆಂಕಿ; ಲಕ್ಷ್ಮಾಂತರ ರೂ ನಷ್ಟ

- Advertisement -
- Advertisement -

ಮಂಗಳೂರು: ಮಣ್ಣಗುಡ್ಡೆಯ ಮಠದಕಣಿ ಮಿಷನ್‌ಗೋರಿ ರಸ್ತೆಯಲ್ಲಿರುವ ದಿನಸಿ ಮಳಿಗೆಯೊಂದರಲ್ಲಿ ಸೋಮವಾರ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಮಣ್ಣಗುಡ್ಡೆಯ ಈ ದಿನಸಿ ಮಳಿಗೆ ಸಂದೀಪ್ ಎಂಬುವರಿಗೆ ಸೇರಿದ್ದಾಗಿದ್ದು, ಮುಂಜಾನೆ 5.30ರ ಸುಮಾರಿಗೆ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿದ್ದ ದಿನಸಿ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಬೆಂಕಿಯು ಅಕ್ಕಪಕ್ಕದ ಮಳಿಗೆಗಳಿಗೆ ವ್ಯಾಪಿಸುವುದನ್ನು ತಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರ ಬಹುದು ಎಂದು ಅಗ್ನಿಶಾಮಕ ಇಲಾಖೆ ಮೂಲಗಳು ತಿಳಿಸಿವೆ. ಸುಮಾರು ಎರಡು ಲಕ್ಷ್ಮ ರೂ ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

- Advertisement -

Latest News

error: Content is protected !!