Thursday, April 25, 2024
Homeಕರಾವಳಿಬಂಟ್ವಾಳ; ನೊಂದವರಿಗೆ ಸಹಾಯ ಮಾಡಲು ಪ್ರೇತವಾದ ಯುವಕ

ಬಂಟ್ವಾಳ; ನೊಂದವರಿಗೆ ಸಹಾಯ ಮಾಡಲು ಪ್ರೇತವಾದ ಯುವಕ

spot_img
- Advertisement -
- Advertisement -

ಬಂಟ್ವಾಳ;  ನವರಾತ್ರಿ ಬಂದ್ರೆ ಸಾಕು ಕರಾವಳಿಯಲ್ಲಿ ನಾನಾ ಬಗೆಯ ವೇಷಗಳದ್ದೇ ಕಾರುಬಾರು. ಆದರೆ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ಅವರು ಈ ಬಾರಿಯ ನವರಾತ್ರಿಗಾಗಿ ವಿಶೇಷ ಧರಿಸಿದ್ದಾರೆ. ಅದು ಕೂಡ ಒಂದಷ್ಟು ನೊಂದವರ ಕಷ್ಟಕ್ಕೆ ನೆರವಾಗಲು.

ಹೌದು…ದೇವದಾಸ್ ಅವರು ಈ ಹಿಂದೆಯೂ ಎರಡು ಬಾರಿ ವೇಷ ಹಾಕಿ ಸಂಗ್ರಹಗೊಂಡ ಹಣದಿಂದ ಅಶಕ್ತರಿಗೆ ನೆರವು ನೀಡಿದ್ದರು. ಆದರೆ ಕೊರೊನಾ ಕಾರಣಕ್ಕೆ ಎರಡು ವರ್ಷಗಳ ಕಾಲ ವೇಷ ಹಾಕುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಹಿಂದೆ ಒಂದೆರಡು ದಿನ ಕಾಲ ಮಾತ್ರ ವೇಷ ಹಾಕಿದ್ದ ಅವರು ಈ ಬಾರಿ ಹೆಚ್ಚಿನ ಹಣ ಸಂಗ್ರಹದ ಉದ್ದೇಶದಿಂದ ಬರೋಬ್ಬರಿ ಏಳು ದಿನಗಳ ಕಾಲ ವೇಷ ಹಾಕಿ ಸುತ್ತಾಟ ನಡೆಸಲಿದ್ದಾರೆ.

ಪ್ರೇತದ ವೇಷ ಹಾಕಿ ಸುತ್ತಾಟ ಆರಂಭಿಸಿರುವ ಅವರು ಅಕ್ಟೋಬರ್ ಐದರವರೆಗೆ ವೇಷ ಧರಿಸುತ್ತಾರೆ. ಒಟ್ಟು ಸುಮಾರು ಇಪ್ಪತ್ತು ಸಾವಿರ ರೂಪಾಯಿ ಸಂಗ್ರಹದ ಗುರಿ ಹೊಂದಿರುವ ಅವರು ಅದನ್ನು ಸಮಾನವಾಗಿ ವಿಂಗಡಿಸಿ ಎರಡು ಕುಟುಂಬಕ್ಕೆ ನೆರವು ನೀಡುವ ಗುರಿ ಹೊಂದಿದ್ದಾರೆ.

ತಮ್ಮ ಮನೆಯ ಪಕ್ಕದಲ್ಲಿರುವ ಬಡ ಕುಟುಂಬದ ಒಂದೇ ಮನೆಯ ಇಬ್ಬರು ಮಕ್ಕಳ ಕಿಡ್ನಿ ಸಂಬಂಧಿ ಖಾಯಿಲೆಯ ಚಿಕಿತ್ಸೆಗೆ ನೆರವಿನ ಜತೆಗೆ ಪಕ್ಕದ ಗ್ರಾಮದ ಬಡ ಕುಟುಂಬದ ಯುವತಿಯ ಮದುವೆಯ ಸಹಾಯ ನೀಡುವ ಯೋಜನೆ ಹಾಕಿ ಕೊಂಡಿದ್ದಾರೆ. ಇವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!