Wednesday, June 3, 2026
Homeತಾಜಾ ಸುದ್ದಿಸಮಗ್ರ ತೋಟಗಾರಿಕಾ ಯೋಜನೆಯಡಿ ಕಾರ್ಕಳ ತಾಲೂಕಿಗೆ 42.53 ಲಕ್ಷ ರೂ. ಅನುದಾನ ಬಿಡುಗಡೆ:ವಿಧಾನಸಭೆಯಲ್ಲಿ ತೋಟಗಾರಿಕಾ ಸಚಿವ...

ಸಮಗ್ರ ತೋಟಗಾರಿಕಾ ಯೋಜನೆಯಡಿ ಕಾರ್ಕಳ ತಾಲೂಕಿಗೆ 42.53 ಲಕ್ಷ ರೂ. ಅನುದಾನ ಬಿಡುಗಡೆ:ವಿಧಾನಸಭೆಯಲ್ಲಿ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ ಮಾಹಿತಿ

- Advertisement -
- Advertisement -

ಬೆಳಗಾವಿ: 2022-23ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕಾ ಯೋಜನೆಯಡಿ ಕಾರ್ಕಳ ತಾಲೂಕಿನ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಗಾಗಿ 42.53 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸದನದಲ್ಲಿ ಈ ಮಾಹಿತಿ ನೀಡಿದ್ದಾರೆ.

ಈ ಅನುದಾನ ಸಂಗ್ರಹಣ, ಸಂಸ್ಕರಣ ಮತ್ತು ಶೇಖರಣಾ ಘಟಕಗಳ ನಿರ್ಮಾಣಕ್ಕೆ ಬಳಕೆಯಾಗಲಿದ್ದು, ಈಗಾಗಲೇ ಕೆಟಿಟಿಪಿ ನಿಯಮಾನುಸಾರ ಗುತ್ತಿಗೆದಾರರನ್ನು ನಿಗದಿ ಪಡಿಸಿದ್ದು ಕೂಡಲೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ ಉತ್ತರ ನೀಡಿದ್ದಾರೆ.

ಕಾರ್ಕಳ ತಾಲೂಕಿನ ರೈತ ಉತ್ಪಾದಕ ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನ ಪ್ರಸ್ತುತ ಯಾವ ಹಂತದಲ್ಲಿದೆ ಎಂದು ಶಾಸಕ ಸುನೀಲ್ ಕುಮಾರ್ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದರು.

- Advertisement -

Latest News

error: Content is protected !!