- Advertisement -
![]()
- Advertisement -

ಬೆಳ್ತಂಗಡಿ: ಎಲ್ಲರೂ ತಮ್ಮ ಹುಟ್ಟುಹಬ್ಬವನ್ನು ತನ್ನ ಗೆಳೆಯರ ಜೊತೆ ರೆಸಾರ್ಟ್, ಪಬ್, ಬಾರ್ ಮುಂತಾದ ಕಡೆ ಎಣ್ಣೆ ಪಾರ್ಟಿ ಜೊತೆ ಅಚರಿಸಿಕೊಳ್ಳುತ್ತಾರೆ ಆದ್ರೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ಗುರುಪ್ರಸಾದ್ ಕೋಟ್ಯಾನ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಉಜಿರೆ ಸಾನಿಧ್ಯ ಎಂಡೋಸಲ್ಫಾನ್ ತರಬೇತಿ ಕೇಂದ್ರದಲ್ಲಿ ಅಲ್ಲಿಯ ಮಕ್ಕಳ ಜೊತೆ ಕೆಕ್ ಕತ್ತರಿಸುವ ಮೂಲಕ ಅಚರಿಸಿಕೊಂಡರು ಜೊತೆಗೆ 5೦ ಕೆಜಿ ಅಕ್ಕಿ ಕೂಡ ತರಬೇತಿ ಕೇಂದ್ರಕ್ಕೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಸಾನಿಧ್ಯ ತರಬೇತಿ ಕೇಂದ್ರದ ಶಿಕ್ಷಕರ ವೃಂದ ,ನವೀನ್ ಸುವರ್ಣ ಇಂದಬೆಟ್ಟು , ಗುರು ಪ್ರಸಾದ್ ಕೋಟ್ಯಾನ್ ಮತ್ತಿತರರು ಜೊತೆಯಲ್ಲಿದ್ದರು.
ಗುರುಪ್ರಸಾದ್ ಕೋಟ್ಯಾನ್ ಈ ಹಿಂದೆ ಕೂಡ ಕೊರೊನಾ ಸಂದರ್ಭದಲ್ಲಿ ಅನೇಕ ಸಮಾಜ ಸೇವೆಗಳನ್ನು ಮಾಡುವ ಮೂಲಕ ಬೆಳ್ತಂಗಡಿ ತಾಲೂಕಿನಲ್ಲಿ ಗುರುತಿಸಿಕೊಂಡಿದ್ದರು.
- Advertisement -


