Wednesday, June 3, 2026
Homeತಾಜಾ ಸುದ್ದಿಕಾಲುಜಾರಿ ಕೆರೆಗೆ ಬಿದ್ದು ತಾತ – ಮೊಮ್ಮಗ ಸಾವು

ಕಾಲುಜಾರಿ ಕೆರೆಗೆ ಬಿದ್ದು ತಾತ – ಮೊಮ್ಮಗ ಸಾವು

- Advertisement -
- Advertisement -

ತುಮಕೂರು: ಶಿರಾ ತಾಲ್ಲೂಕಿನ ಕುಂಟೆಗೌಡನಹಳ್ಳಿ ಗ್ರಾಮದ ಕಟ್ಟೆಯಲ್ಲಿ ಹಸು ಮೈ ತೊಳೆಯಲು ಹೋಗಿ ತಾ ಹಾಗೂ ಮೊಮ್ಮಗ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.


ಕುಂಟೆಗೌಡನಹಳ್ಳಿ ಗ್ರಾಮದ ಕರಿಯಣ್ಣ (60) ಹಾಗೂ ಮೊಮ್ಮಗ ದಿಲೀಪ್ (12) ಮೃತಪಟ್ಟವರಾಗಿದ್ದಾರೆ. ಅಂದ ಹಾಗೇ ಹಸುಗಳಿಗೆ ಕಟ್ಟೆಯಲ್ಲಿ ಮೈ ತೊಳೆಯುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಮೊಮ್ಮಗ ದಿಲೀಪ್ ನೀರಿನಲ್ಲಿ ಬಿದ್ದಿದ್ದಾನೆ. ಮೊಮ್ಮಗನನ್ನು ಕಾಪಾಡಲು ತಾತ ಕರಿಯಣ್ಣ ಸಹ ನೀರಿಗೆ ಧುಮುಕಿದ್ದು ಕೆಸರಿನಲ್ಲಿ ಸಿಲುಕಿ ಇಬ್ಬರು ಮೃತ ಪಟ್ಟಿದ್ದಾರೆ.


ಇನ್ನು ಇಬ್ಬರ ಸಾವಿನಿಂದ ಅವರ ಕುಟುಂಬದವರ ಆಕ್ರಂದನ ಮುಗಿಲು ಮಟ್ಟಿತ್ತು.ಈ ಸಂಬಂಧ ಕಳ್ಳಂಬೆಳ್ಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ


ಇದೇ ವೇಳೆವಿಷಯ ತಿಳಿದು ಘಟನಾ ಸ್ಥಳಕ್ಕೆ ಶಾಸಕ ರಾಜೇಶ್ ಗೌಡ, ತಹಶೀಲ್ದಾರ್ ಮಮತಾ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸರಕಾರದ ವತಿಯಿಂದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

- Advertisement -

Latest News

error: Content is protected !!