Wednesday, July 3, 2024
Homeತಾಜಾ ಸುದ್ದಿ1,563 ನೀಟ್​ ಅಭ್ಯರ್ಥಿಗಳ ಗ್ರೇಸ್​ ಅಂಕಗಳು ರದ್ದು; ಜೂನ್ 23ಕ್ಕೆ ನಡೆಯಲಿದೆ ಮರು ಪರೀಕ್ಷೆ

1,563 ನೀಟ್​ ಅಭ್ಯರ್ಥಿಗಳ ಗ್ರೇಸ್​ ಅಂಕಗಳು ರದ್ದು; ಜೂನ್ 23ಕ್ಕೆ ನಡೆಯಲಿದೆ ಮರು ಪರೀಕ್ಷೆ

spot_img
- Advertisement -
- Advertisement -

ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರದಂದು ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಮತ್ತೊಮ್ಮೆ ವಿಚಾರಣೆ ನಡೆಯಿತು.

ಈ ಸಂದರ್ಭದಲ್ಲಿ, NEET-UG 2024 ರ 1,563 ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇನ್ನು ಅಂತಹ ಅಭ್ಯರ್ಥಿಗಳಿಗೆ ಜೂನ್ 23 ರಂದು ಮರು ಪರೀಕ್ಷೆಗೆ ಹಾಜರಾಗುವ ಆಯ್ಕೆಯನ್ನು ನೀಡಿದೆ.

ಜುಲೈ 6 ರಂದು ನಡೆಯಲಿರುವ ಕೌನ್ಸೆಲಿಂಗ್ ಅನ್ನು ನಿಷೇಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ನೀಟ್​ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಮೂರು ಅರ್ಜಿಗಳ ವಿಚಾರಣೆ ಇಂದು ನಡೆದಿದೆ.

ನೀಟ್ ಪರೀಕ್ಷೆ ನಡೆಸುವ ಸಂಸ್ಥೆಯಾಗಿರುವ ಎನ್​ಟಿಎ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಗ್ರೇಸ್​ ಮಾರ್ಕ್​ಗಳ ಕುರಿತು ಇಂದು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡನೆ ನಡೆಯಿತು.

ಪರೀಕ್ಷೆಯ ರದ್ದತಿ ಹಾಗೂ ಮರು ಪರೀಕ್ಷೆ ಕುರಿತು ಸುಪ್ರೀಂ ವಿಚಾರಣೆ ನಡೆಸಿದ್ದು ಅಂತಿಮವಾಗಿ ಎನ್​ಟಿಎ ನೀಡಿರುವ ಗ್ರೇಸ್​ ಅಂಕಗಳನ್ನು ರದ್ದುಗೊಳಿಸಿ, ಜೂನ್ 23ಕ್ಕೆ ಮರುಪರೀಕ್ಷೆ ನಿರ್ಧಾರ ಕೈಗೊಳ್ಳಲಾಯಿತು. ಫಿಸಿಕ್ಸ್​ ವಾಲಾ ಸಿಇಒ ಅಲಖ್ ಪಾಂಡೆ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಗ್ರೇಸ್ ಅಂಕಗಳನ್ನು ನೀಡುವ ಎನ್​ಟಿಎ ನಿರ್ಧಾರ ತಪ್ಪು ಎಂದು ಹೇಳಿದ್ದರು.

Latest News

error: Content is protected !!