Thursday, June 4, 2026
Homeತಾಜಾ ಸುದ್ದಿತಾಂತ್ರಿಕ ದೋಷದಿಂದ ಕೆಟ್ಟು ನಿಂತ ಮೆಟ್ರೋ: ಡೋರ್ ಓಪನ್ ಆಗದೆ ಪ್ರಯಾಣಿಕರ ಪರದಾಟ

ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಮೆಟ್ರೋ: ಡೋರ್ ಓಪನ್ ಆಗದೆ ಪ್ರಯಾಣಿಕರ ಪರದಾಟ

- Advertisement -
- Advertisement -

ಬೆಂಗಳೂರು: ತಾಂತ್ರಿಕ ದೋಷದಿಂದ ನೇರಳೆ ಮಾರ್ಗದ ಮೆಟ್ರೋ ಮಾರ್ಗದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ಮೆಟ್ರೋ ಪ್ರಯಾಣಿಕರು ಇದರಿಂದಾಗಿ ಭಾರೀ ಸಮಸ್ಯೆ ಎದುರಿಸುವಂತಾಯಿತು.

ಇಂದು ಬೆಳಗ್ಗೆ 9.58 ಗಂಟೆ ಸುಮಾರಿಗೆ ಮೆಟ್ರೋ ಹತ್ತಿದ್ದ ಪ್ರಯಾಣಿಕರು ಇನ್ನೇನು ಇಳಿಯಬೇಕು ಎಂದು ಕಾದು ನಿಂತಿದ್ದು ಡೋರ್ ಓಪನ್ ಆಗದೆ ಬೋಗಿ ಒಳಗಡೆ ಲಾಕ್ ಆಗಿದ್ದರು. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಬೋಗಿಯ ಡೋರ್​ಗಳು ಓಪನ್ ಆಗದೆ ಲಾಕ್ ಆಗಿದ್ದವು. ಗಂಟೆಗಟ್ಟಲೆ ಕಾದರೂ ಡೋರ್ ಓಪನ್ ಆಗದೆ ಒಳಗಡೆ ಇದ್ದ ಪ್ರಯಾಣಿಕರು ಪರದಾಡುವಂತಾಗಿತ್ತು. ಬಳಿಕ ಸಮಸ್ಯೆ ಆಗಿದ್ದ ಮೆಟ್ರೋ ಬೋಗಿಯನ್ನ ಮೆಜೆಸ್ಟಿಕ್​ನ ಟ್ರ್ಯಾಕ್​ಗೆ ಶಿಫ್ಟ್ ಮಾಡಿ ಮೆಟ್ರೋ ಇಂಜಿನಿಯರ್​ಗಳನ್ನ ಕರೆಸಿ ಲಾಕ್ ಆಗಿದ್ದ ಡೋರ್ ಓಪನ್ ಮಾಡಿಸಲಾಯ್ತು. ಬಳಿಕ ಎಂದಿನಂತೆ ಸಂಚಾರ ಯಥಾಸ್ಥಿತಿಗೆ ಬಂತು. ಮೆಟ್ರೋ ಪ್ರಯಾಣಿಕರಿಗೆ ಆದ ಅಡಚಣೆ ಬಗ್ಗೆ ಬಿಎಂಆರ್​ಸಿಎಲ್ ವಿಷಾಧ ವ್ಯಕ್ತಪಡಿಸಿದೆ. ನಮ್ಮ ಮೆಟ್ರೋ ಎರಡು ಗಂಟೆಗಳ ಬಳಿಕ ದೋಷಯುಕ್ತ ಮೆಟ್ರೋ ಬೋಗಿ ಸರಿಪಡಿಸಿದೆ.

ಮುಂಜಾನೆ 9.58ರಲ್ಲಿ ವ್ಯತ್ಯಯವುಂಟಾಗಿದ್ದ ನೇರಳೆ ಮಾರ್ಗದ ಮೆಟ್ರೋ ಸಂಚಾರ ಬೆಳಗ್ಗೆ 11:30 ರ ವೇಳೆಗೆ ಸಹಜ ಸ್ಥಿತಿಗೆ ಮರಳಿದೆ. ಬೆಳಗ್ಗೆ ಕೆಲಸಕ್ಕೆ ತರಳುವ ವೇಳೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಅಡಚಣೆ ಉಂಟಾದ ಕಾರಣ ಕಚೇರಿಗಳಿಗೆ ತಲುಪಲು ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಿದ್ದು, ಪ್ರಯಾಣಿಕರು ಒಂದು ಗಂಟೆಗಳ ಕಾಲ ಮೆಟ್ರೋ ರೈಲಿನ ಒಳಗಡೆಯೇ ಲಾಕ್ ಆಗುವಂತಾಗಿತ್ತು.

- Advertisement -

Latest News

error: Content is protected !!