Thursday, June 26, 2025
Homeಅಪರಾಧಹುಡುಗಿಯ ಈ ಖಾಸಗಿ ಅಂಗಗಳನ್ನು ಹಿಡಿಯುವುದು ಅತ್ಯಾಚಾರವಲ್ಲ; ಇವೆಲ್ಲವೂ ‘ತೀವ್ರ ಲೈಂಗಿಕ ದೌರ್ಜನ್ಯ’ಗಳು; ಅಲಹಾಬಾದ್ ಹೈಕೋರ್ಟ್ ನಿಂದ ತೀರ್ಪು

ಹುಡುಗಿಯ ಈ ಖಾಸಗಿ ಅಂಗಗಳನ್ನು ಹಿಡಿಯುವುದು ಅತ್ಯಾಚಾರವಲ್ಲ; ಇವೆಲ್ಲವೂ ‘ತೀವ್ರ ಲೈಂಗಿಕ ದೌರ್ಜನ್ಯ’ಗಳು; ಅಲಹಾಬಾದ್ ಹೈಕೋರ್ಟ್ ನಿಂದ ತೀರ್ಪು

spot_img
- Advertisement -
- Advertisement -

ಅಲಹಾಬಾದ್: ಇಲ್ಲಿನ ಹೈಕೋರ್ಟ್ ಇತ್ತೀಚೆಗೆ ಹುಡುಗಿಯ ಸ್ತನಗಳನ್ನು ಹಿಡಿಯುವುದು, ಅವಳ ಪೈಜಾಮದ ದಾರವನ್ನು ಎಳೆಯುವುದು ಹಾಗೂ ಅವಳನ್ನು ಎಳೆಯಲು ಪ್ರಯತ್ನಿಸುವುದು ಅತ್ಯಾಚಾರವಲ್ಲ. ಹಾಗೆಯೇ ಅದು ಅತ್ಯಾಚಾರದ ಪ್ರಯತ್ನದ ಆರೋಪಗಳಿಗೆ ಸಮನಾಗುವುದಿಲ್ಲ ಎಂದು ಅಲಹಾಬಾದ್ ತೀರ್ಪು ನೀಡಿದೆ.

ನ್ಯಾಯಾಧೀಶ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ಪೀಠವು ಇವೆಲ್ಲವೂ ‘ತೀವ್ರ ಲೈಂಗಿಕ ದೌರ್ಜನ್ಯ’ದ ಪ್ರಾಥಮಿಕ ಅಪರಾಧಗಳ ಅಡಿಯಲ್ಲಿ ಬರುತ್ತವೆ ಎಂದು ತಿಳಿಸಿದೆ.   

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 18 (ಅಪರಾಧ ಎಸಗುವ ಪ್ರಯತ್ನ) ಅಡಿಯಲ್ಲಿ ನ್ಯಾಯಾಧೀಶ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ಪೀಠವು ಇಬ್ಬರು ಆರೋಪಿಗಳಾದ ಆಕಾಶ್ ಮತ್ತು ಪವನ್ ಅವರನ್ನು ಸಮನ್ಸ್ ಮಾಡಿದ್ದ ಹಿಂದಿನ ವಿಚಾರಣಾ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿದೆ ಎಂದು ಲೈವ್‌ಲಾ ವರದಿ ತಿಳಿಸಿದೆ. ಅಷ್ಟೇ ಅಲ್ಲದೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354-ಬಿ (ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 9 ಮತ್ತು 10 (ತೀವ್ರ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.

ಘಟನೆಯ ವಿವರ: 11 ರಿಂದ 12 ವರ್ಷ ವಯಸ್ಸಿನ ಹುಡುಗಿಯೊಬ್ಬಳ ಸ್ತನಗಳನ್ನು ಇಬ್ಬರು ಆರೋಪಿಗಳು ಹಿಡಿದರು ಎಂದು ಆರೋಪಿಸಲಾಗಿದೆ. ಹಾಗೆಯೇ ಆರೋಪಿಗಳಲ್ಲಿ ಒಬ್ಬ ಆಕೆಯ ಪೈಜಾಮದ ದಾರವನ್ನು ಎಳೆದು, ಆಕೆಯನ್ನು ಮೋರಿ ಅಡಿಗೆ ಎಳೆಯಲು ಪ್ರಯತ್ನಿಸಿದನು. ದಾರಿಹೋಕರು ಮಧ್ಯಪ್ರವೇಶಿಸಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!