Thursday, May 2, 2024
Homeತಾಜಾ ಸುದ್ದಿಆರ್ಕಿಡ್ ದಿ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ರಾಜ್ಯಪಾಲರಿಂದ ಶ್ಲಾಘನೆ

ಆರ್ಕಿಡ್ ದಿ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ರಾಜ್ಯಪಾಲರಿಂದ ಶ್ಲಾಘನೆ

spot_img
- Advertisement -
- Advertisement -

ಬೆಂಗಳೂರು: ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ (ಒಐಎಸ್) ಜಾಲಹಳ್ಳಿ ಶಾಖೆಯ ವಿದ್ಯಾರ್ಥಿಗಳು ಬೆಂಗಳೂರಿನ ರಾಷ್ಟ್ರೀಯ ಸೀಮಾ ಸುಂಕ, ಕೇಂದ್ರ ಅಬಕಾರಿ ಹಾಗೂ ಮಾದಕ ವಸ್ತು ಅಕಾಡೆಮಿ (ಎನ್.ಎ.ಸಿ.ಐ.ಎನ್.) ಯಲ್ಲಿ ನಡೆದ ದಿಕ್ಸೂಚಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐಆರ್‌ಎಸ್ ತರಬೇತಿ ಅಧಿಕಾರಿಗಳ ಆಫೀಸರ್ ಟ್ರೇನಿಗಳ 74ನೇ  ದಿಕ್ಸೂಚಿ ಕಾರ್ಯಕ್ರಮವನ್ನು ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು. ರಾಜ್ಯಪಾಲರಾದ ಗೆಹ್ಲೋಟ್ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಒಐಎಸ್ ಜಾಲಹಳ್ಳಿ ಶಾಖೆಯ 40 ವಿದ್ಯಾರ್ಥಿಗಳು ಬ್ಯಾಂಡ್ ಸೆಟ್‌ನಲ್ಲಿ ಮಿಂಚಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ಸಂಭ್ರದ ಅಮೃತ ಕಾಲದಲ್ಲಿ ನವ ಭಾರತದ ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳ ‘ಪಂಚಪ್ರಾಣ’ (ಐದು ನಿರ್ಣಯ)ಗಳ ಪರಿಕಲ್ಪನೆಯನ್ನು ಯುವ ಅಧಿಕಾರಿಗಳು ತಮ್ಮ ವೃತ್ತಿ ಮತ್ತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ರಾಜ್ಯಪಾಲರು ಬ್ಯಾಂಡ್ ಪ್ರದರ್ಶನವನ್ನು ನೀಡಿದ ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘಿಸಿದರಲ್ಲದೆ, ಅವರಿಗೆ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸೀಮಾ ಸೋಮನ್ ಮತ್ತು ಆಪರೇಷನಲ್ ಮ್ಯಾನೇಜರ್ ಸ್ವರ್ಣಲತಾ ಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಸಮಾರಂಭದಲ್ಲಿ, ಬೆಂಗಳೂರಿನ ಕೇಂದ್ರೀಯ ತೆರಿಗೆ ಮತ್ತು ಸೀಮಾ ಸುಂಕ ಇಲಾಖೆಯ ಮುಖ್ಯ ಆಯುಕ್ತರಾದ ಶ್ರೀಮತಿ ರಂಜನಾ ಝಾ, ನವೆದೆಹಲಿಯ ಡಿಜಿ ಸಿಸ್ಟಮ್‌ನ ಮಹಾನಿರ್ದೇಶಕರಾದ ಎಸ್.ಆರ್. ಬರೂಹಾ, ಎನ್ಎಸಿಐಎಸ್, ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕ ನಾರಾಯಣ ಸ್ವಾಮಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!