Thursday, June 4, 2026
Homeಕರಾವಳಿಧರ್ಮಸ್ಥಳ ಗಲಾಟೆ ಬಗ್ಗೆ ವರದಿ ಕೇಳಲಾಗಿದೆ; ಗೃಹ ಸಚಿವಡಾ. ಜಿ. ಪರಮೇಶ್ವರ್ ಹೇಳಿಕೆ

ಧರ್ಮಸ್ಥಳ ಗಲಾಟೆ ಬಗ್ಗೆ ವರದಿ ಕೇಳಲಾಗಿದೆ; ಗೃಹ ಸಚಿವಡಾ. ಜಿ. ಪರಮೇಶ್ವರ್ ಹೇಳಿಕೆ

- Advertisement -
- Advertisement -

ಬೆಂಗಳೂರು: ಧರ್ಮಸ್ಥಳದಲ್ಲಿ ನಿನ್ನೆ ಸಂಜೆ ನಡೆದ ಗಲಾಟೆ ಬಗ್ಗೆ ವರದಿ ಕೊಡುವಂತೆ ಕೇಳಿರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಘಟನೆ ಯಾಕೆ ಸಂಭವಿಸಿದೆ, ಕಾರಣ ಯಾರು ಮತ್ತು ಉದ್ದೇಶ ಏನು ಎಂಬ ವರದಿ ಕೊಡುವಂತೆ ಹೇಳಿದ್ದು, ಸಂಘರ್ಷ ಯಾಕೆ ಆಗುತ್ತಿದೆ ಎಂಬುದು ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದ್ದು, ಒಬ್ಬ
ವ್ಯಕ್ತಿ ಅನೇಕ ಶವಗಳನ್ನು ಹೂತಿದ್ದೇನೆ ಎಂಬ ಮಾಹಿತಿ ನೀಡಿದ್ದ ಕಾರಣ ಸಾರ್ವಜನಿಕವಾಗಿ ಪರಿಗಣಿಸಿ ಎಸ್ಐಟಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ನಿನ್ನೆ ಗದ್ದಲಕ್ಕೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿದೂರು ಕೊಟ್ಟಿದ್ದು, ತನಿಖೆ ನಡೆಯುತ್ತದೆ ಎಂದು ಹೇಳಿರುವ ಗೃಹ ಸಚಿವರು, ಮುಂದೆ ಇನ್ನೂ ಹೆಚ್ಚುವರಿ ಸ್ಥಳ ಅಗೆಯಬೇಕು ಎಂದರೆ ಎಸ್ಐಟಿ ತೀರ್ಮಾನ ಮಾಡಲಿದೆ ಎಂದು ತಿಳಿಸಿದ್ದಾರೆ.

ಇನ್ನು ನಿನ್ನೆಯ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾನೂನು ಎಲ್ಲರಿಗೂ ಒಂದೇ, ಯಾರು ತಪ್ಪು ಮಾಡಿದ್ದರೂ ಶಿಕ್ಷೆ ಆಗುತ್ತದೆ ಎಂದಿದ್ದಾರೆ.

- Advertisement -

Latest News

error: Content is protected !!