Saturday, May 18, 2024
Homeಉದ್ಯಮPUBG ಸೇರಿದಂತೆ ಮತ್ತೆ 275 ಚೀನೀ ಆ್ಯಪ್ ನಿಷೇಧಕ್ಕೆ ಕೇಂದ್ರ ಸರ್ಕಾರ ನಿರ್ಧಾರ?

PUBG ಸೇರಿದಂತೆ ಮತ್ತೆ 275 ಚೀನೀ ಆ್ಯಪ್ ನಿಷೇಧಕ್ಕೆ ಕೇಂದ್ರ ಸರ್ಕಾರ ನಿರ್ಧಾರ?

spot_img
- Advertisement -
- Advertisement -

ನವದೆಹಲಿ: ಚೀನಾ ಜೊತಗಿನ ಗಡಿ ಘರ್ಷಣೆ ನಡುವೆ ಭಾರತದಲ್ಲಿ 59 ಚೀನೀ ಆ್ಯಪ್ ಗಳನ್ನು ನಿಷೇಧಿಸಿದ ನಂತರ, ಸರ್ಕಾರವು ಈಗ ಚೀನಾದಲ್ಲಿ ಇನ್ನೂ ಕೆಲವು 275 ಆಯಪ್‌ಗಳನ್ನು ನಿಷೇಧಿಸಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಚೀನಾದಲ್ಲಿ ಸರ್ವರ್‌ಗಳು ಇರುವ ಕಂಪನಿಗಳ ಆ್ಯಪ್‌ ಅನ್ನು ತೆಗೆದು ಹಾಕುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆಯಂತೆ.

275 ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಚೀನಾದ ಇಂಟರ್ನೆಟ್ ಟೆನ್ಸೆಂಟ್‌ನ ಭಾಗವಾಗಿರುವ ಗೇಮಿಂಗ್ ಅಪ್ಲಿಕೇಶನ್ PUBG ಅನ್ನು ಸಹ ಒಳಗೊಂಡಿದೆ ಎನ್ನಲಾಗಿದೆ. ಇದರೊಂದಿಗೆ ಶಿಯೋಮಿ ಕಂಪೆನಿ ನಿರ್ಮಿತ ಜಿಲಿ ಆ್ಯಪ್, ಇ-ಕಾಮರ್ಸ್ ಅಲಿಬಾಬಾದ ಅಲೈಕ್ಸ್ಪ್ರೆಸ್ ಆ್ಯಪ್, ರೆಸ್ಸೊ ಆ್ಯಪ್ ಮತ್ತು ಟಿಕ್ ಟಾಕ್ ಆ್ಯಪ್ ನಿರ್ಮಿತ ಬೈಟ್ ಡಾನ್ಸ್ ನ ಯುಲೈಕ್ ಆ್ಯಪ್ ಗಳು ಸಹ ಒಳಗೊಂಡಿದೆ.

ಈ ಎಲ್ಲಾ 275 ಅಪ್ಲಿಕೇಶನ್‌ಗಳು ಯಾವುದೇ ರೀತಿಯಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆಗೆ ಧಕ್ಕೆ ತರುತ್ತಿಲ್ಲ ಎನ್ನುವುದನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಇವುಗಳಲ್ಲಿ ಯಾವುದೇ ರೀತಿಯ ನ್ಯೂನತೆ ಕಂಡುಬಂದರೆ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗುವುದು ಅಂತ ಹೇಳಲಾಗುತ್ತಿದೆ.

ಈ ಹಿಂದೆ ಟಿಕ್‍ಟಾಕ್, ಹಲೋ, ಯುಸಿ ಬ್ರೌಸರ್ ಸೇರಿದಂತೆ ಒಟ್ಟು 59 ಮೊಬೈಲ್ ಆ್ಯಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿತ್ತು. ಇನ್ನು ಬಹುತೇಕರು ಸರ್ಕಾರದ ಆದೇಶದ ಮುನ್ನವೇ ಚೀನಾ ಮೂಲದ ಆ್ಯಪ್ ಗಳನ್ನು ತಮ್ಮ ಅನ್ ಇನ್‍ಸ್ಟಾಲ್ ಮಾಡಿಕೊಂಡಿದ್ದರು.

- Advertisement -
spot_img

Latest News

error: Content is protected !!