Sunday, April 28, 2024
Homeಕರಾವಳಿಉಡುಪಿಸಂಭ್ರಮದ ಕಾರ್ಕಳ ಉತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಗಿ

ಸಂಭ್ರಮದ ಕಾರ್ಕಳ ಉತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಗಿ

spot_img
- Advertisement -
- Advertisement -

ಕಾರ್ಕಳ: ಕನ್ನಡ ನಾಡಿನ ಧರ್ಮ ಮತ್ತು ಸಂಸ್ಕೃತಿಯಲ್ಲಿ ಸಹೋದರತ್ವ ಮತ್ತು ಸಾಮರಸ್ಯದ ಮನೋಭಾವನೆ ತುಂಬಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಉಡುಪಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕಾರ್ಕಳ ಉತ್ಸವದಲ್ಲಿ ಭಾಗಿಯಾಗಿ ಮಾತನಾಡಿದರು.

ರಾಜ್ಯದ ದಕ್ಷಿಣ ಭಾಗದಲ್ಲಿರುವ ಕಾರ್ಕಳ ನಗರವು ಶಿಲ್ಪಕಲೆಯಲ್ಲಿ ತನ್ನ ಪ್ರಾವೀಣ್ಯತೆಗಾಗಿ ವಿಶ್ವಪ್ರಸಿದ್ಧವಾಗಿದೆ. ಇಲ್ಲಿನ ಶಿಲ್ಪಿಗಳಿಗೆ ಕಲ್ಲುಗಳಿಗೆ ಜೀವ ತುಂಬುವ ಸಾಮರ್ಥ್ಯವಿದೆ. ಅವರ ಕಲೆಯ ನೇರ ಸಾಕ್ಷ್ಯವನ್ನು ಇಲ್ಲಿ ಕಾಣಬಹುದಾಗಿದೆ ಎಂದ ಅವರು, ಕಾರ್ಕಳ ನಗರದ ಪ್ರಮುಖ ಆಕರ್ಷಣೆಯೆಂದರೆ ನಮಗೆ ಸತ್ಯ, ಅಹಿಂಸೆ ಮತ್ತು ಪರಿತ್ಯಾಗದ ಸಂದೇಶವನ್ನು ನೀಡುವ ಭಗವಾನ್ ಬಾಹುಬಲಿಯ ಬೃಹತ್ ಪ್ರತಿಮೆ. ಸರ್ವಧರ್ಮ ಸಮನ್ವಯದ ಈ ನೆಲದಲ್ಲಿ ಹುಟ್ಟಿದ ಅನೇಕ ಮಹನೀಯರು ರಾಷ್ಟ್ರಕ್ಕಾಗಿ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಈ ಊರಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ

ಕರಾವಳಿ ಕರ್ನಾಟಕದ ಎಲ್ಲಾ ಧರ್ಮಗಳ ಮತ್ತು ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವಾದ ಕಾರ್ಕಳದಲ್ಲಿ 10 ದಿನಗಳ ಭಾಷಾ ಸಂಸ್ಕೃತಿ ಮತ್ತು ಕಲಾ ಉತ್ಸವದ ವೈಭವದಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ. ಈ ಪವಿತ್ರ ಕ್ಷೇತ್ರದ ಜನತೆ ಧರ್ಮ, ಸಂಸ್ಕೃತಿಯ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ಮಾಡುವವರಾದ ಶ್ರೀ ವಿ ಸುನೀಲ್ ಕುಮಾರ್ ಅವರು ಇತಿಹಾಸವನ್ನು ಜೀವಂತವಾಗಿಡುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಈ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ, ಉಡುಪಿ ಜಿಲ್ಲಾಧಿಕಾರಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು

- Advertisement -
spot_img

Latest News

error: Content is protected !!