Sunday, May 19, 2024
Homeತಾಜಾ ಸುದ್ದಿಮದುವೆಯಾಗುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಖರ್ಚಿಲ್ಲದೇ ಏರಬಹುದು ಹಸೆಮಣೆ

ಮದುವೆಯಾಗುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಖರ್ಚಿಲ್ಲದೇ ಏರಬಹುದು ಹಸೆಮಣೆ

spot_img
- Advertisement -
- Advertisement -

ಬೆಂಗಳೂರು : ರಾಜ್ಯ ಸರ್ಕಾರವು ಮದುವೆಯಾಗುವ ಬಡ ಸಮುದಾಯದ ಯುವಕ-ಯುವತಿಯರಿಗೆ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಧಾರ್ಮಿಕ ದತ್ತಿ ಇಲಾಖೆಯಿಂದ ಸಾಮೂಹಿಕ ಕಾರ್ಯಕ್ರಮಕ್ಕೆ ಶೀಘ್ರವೇ ದಿನಾಂಕ, ದೇಗುಲಗಳ ಪಟ್ಟಿ ಪ್ರಕಟವಾಗಲಿದೆ.

ಕಳೆದ ವರ್ಷ ರಾಜ್ಯದ ಎ ವರ್ಗದ 100 ದೇಗುಲಗಳಲ್ಲಿ ರಾಜ್ಯ ಸರ್ಕಾರವೇ ಸಾಮೂಹಿಕ ವಿವಾಹ ಏರ್ಪಡಿಸಿತ್ತು. ಏಪ್ರಿಲ್ 26 ಮತ್ತು ಮೇ. 24 ರಂದು ವಿವಾಹ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಇದೀಗ ಮತ್ತೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿಬಂದಿದೆ.

ಇನ್ನು ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ವಧು-ವರರಿಗೆ ಸರ್ಕಾರ ಉಡುಗೊರೆ ನೀಡಲಿದ್ದು, ವಧುವಿಗೆ 40 ಸಾವಿರ ರೂ. ಮೌಲ್ಯದ 8 ಗ್ರಾಂ ಚಿನ್ನದ ತಾಳಿ ಜೊತೆಗೆ ಧಾರೆ ಸೀರೆ, ಹೂವಿನ ಹಾರ, ಬ್ಲಾಸ್ ಪೀಸ್ ಖರೀದಿಗೆ 10 ಸಾವಿರ ರೂ. ವರನಿಗೆ ಹೂ ಹಾರ, ಪಂಚೆ, ಶರ್ಟ್, ಶಲ್ಯ ಖರೀದಿಗೆ 5 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.

- Advertisement -
spot_img

Latest News

error: Content is protected !!