Monday, May 20, 2024
Homeಕರಾವಳಿಹೊರರಾಜ್ಯದಿಂದ ರಾಜ್ಯಕ್ಕೆ ಆಗಮಿಸುವವರ ಗಮನಕ್ಕೆ: ನಾಳೆ ಸಂಜೆಯೊಳಗೆ ಸ್ಪಷ್ಟ ಚಿತ್ರಣ

ಹೊರರಾಜ್ಯದಿಂದ ರಾಜ್ಯಕ್ಕೆ ಆಗಮಿಸುವವರ ಗಮನಕ್ಕೆ: ನಾಳೆ ಸಂಜೆಯೊಳಗೆ ಸ್ಪಷ್ಟ ಚಿತ್ರಣ

spot_img
- Advertisement -
- Advertisement -

ಕಾರ್ಕಳ: ಕೊರೋನಾದಿಂದ ಇಡೀ ದೇಶವೇ ಲಾಕ್‍ಡೌನ್‍ನಲ್ಲಿದ್ದು ವಿವಿಧ ಉದ್ದೇಶಗಳಿಂದ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ನೀವು ತಮ್ಮೂರಿಗೆ ಬರಲು ತವಕ ಪಡುತ್ತಿರುವ ಕಷ್ಟ ನಮಗೆ ಅರ್ಥ ಆಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಹೊರ ರಾಜ್ಯದಲ್ಲಿ ನೆಲೆಸಿರುವ ಮೂಲ ಕರ್ನಾಟಕದವರನ್ನು ಕರೆಸಿಕೊಳ್ಳುವ ಬಗ್ಗೆ ಅಂತರ್‍ರಾಜ್ಯ ಗಡಿಯನ್ನು ಮುಕ್ತಗೊಳಿಸುವ ಬಗ್ಗೆ ಅನುಮತಿ ನೀಡಿದೆ. ಈ ಬಗ್ಗೆ ನಿಯಮಾವಳಿಗಳು ರಚನೆ ಆಗುತ್ತಿದ್ದು ಜಿಲ್ಲಾಡಳಿತ ಮತ್ತು ರಾಜ್ಯದ ಆಡಳಿತ ನಡುವೆ ನಿರಂತರ ಸಂಪರ್ಕದಲ್ಲಿ ನಾವಿದ್ದೇವೆ. ನಾಳೆ ಸಂಜೆಯೊಳಗೆ ಇದರ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರುವ ನಿರೀಕ್ಷೆ ಇದೆ ಎಂದು ಕಾರ್ಕಳದ ಶಾಸಕ ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ತುರ್ತು ಹಾಗೂ ಅಗತ್ಯ ಇರುವವರಿಗೆ ಊರಿಗೆ ಬರುವವರಿಗೆ ಖಂಡಿತವಾಗಿ ಅನುಮತಿಯನ್ನು ಮಾಡಿ ಕೊಡುತ್ತೇವೆ. ಯಾರೂ ತರಾತುರಿ ಮಾಡುವ ಅಗತ್ಯ ಇಲ್ಲ. ನಾಳೆ ಸಂಜೆಯೊಳಗೆ ಎಲ್ಲವೂ ಗೊತ್ತಾಗಲಿದ್ದು ಎಲ್ಲಾ ಬಂಧುಗಳು ನಮ್ಮೊಂದಿಗೆ ಸಹಕರಿಸುವಂತೆ ಈ ಮೂಲಕ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

#ಮುಂಬೈ #ಪೂಣೆಯಲ್ಲಿರುವ #ಬಂಧುಗಳೆ ಕೊರೋನಾದಿಂದ ಇಡೀ ದೇಶವೇ ಲಾಕ್‍ಡೌನ್‍ನಲ್ಲಿದ್ದು ವಿವಿಧ ಉದ್ದೇಶಗಳಿಂದ ಬೇರೆ ರಾಜ್ಯಗಳಲ್ಲಿ…

Posted by Sunil Kumar Karkala on Thursday, 30 April 2020

- Advertisement -
spot_img

Latest News

error: Content is protected !!