Thursday, November 5, 2026
Homeಪ್ರಮುಖ-ಸುದ್ದಿರಾಜ್ಯದ ರೈತರಿಗೆ ಸಿಹಿ ಸುದ್ದಿ; ಬರ ಪರಿಹಾರ ಮೊತ್ತ ₹2,500 ರಿಂದ ₹5,000ಕ್ಕೆ ಹೆಚ್ಚಳ

ರಾಜ್ಯದ ರೈತರಿಗೆ ಸಿಹಿ ಸುದ್ದಿ; ಬರ ಪರಿಹಾರ ಮೊತ್ತ ₹2,500 ರಿಂದ ₹5,000ಕ್ಕೆ ಹೆಚ್ಚಳ

- Advertisement -
- Advertisement -

ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಈ ಹಿಂದೆ ನೀಡಲಾಗುತ್ತಿದ್ದ ₹2,500 ಬರ ಪರಿಹಾರದ ಮೊತ್ತವನ್ನು ₹5,000ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

ಯಾದಗಿರಿ ಜಿಲ್ಲೆಯ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಬರ ಪರಿಹಾರ ವಿತರಣೆಗೆ ಚಾಲನೆ ನೀಡಲಾಗಿದೆ. ಬಟನ್ ಒತ್ತುವ ಮೂಲಕ ಡಿಬಿಟಿ (DBT) ವ್ಯವಸ್ಥೆಯಡಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಘೋಷಿಸಿದಂತೆ ₹1,250 ಕೋಟಿ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಸದ್ಯ ₹2,500 ಪರಿಹಾರ ನೀಡಲಾಗುತ್ತಿದ್ದು, ದೀಪಾವಳಿ ಹಬ್ಬದ ಬಳಿಕ ಹೆಚ್ಚುವರಿಯಾಗಿ ₹2,500 ನೀಡಲಾಗುವುದು. ಈ ಮೂಲಕ ಪ್ರತಿ ರೈತರಿಗೆ ಒಟ್ಟು ₹5,000 ಬರ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.

- Advertisement -

Latest News

error: Content is protected !!