Tuesday, May 21, 2024
Homeಕರಾವಳಿಬಂಟ್ವಾಳ: ಬದಿಗುಡ್ಡೆ-ವಾರಾಟ ಮಾಡದಲ್ಲಿ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ವಲಸರಿ ನೇಮದ ಗೊನೆ ಮುಹೂರ್ತ

ಬಂಟ್ವಾಳ: ಬದಿಗುಡ್ಡೆ-ವಾರಾಟ ಮಾಡದಲ್ಲಿ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ವಲಸರಿ ನೇಮದ ಗೊನೆ ಮುಹೂರ್ತ

spot_img
- Advertisement -
- Advertisement -

ಬಂಟ್ವಾಳ: ಮಾಣಿ ಗ್ರಾಮದ ಬದಿಗುಡ್ಡೆ-ವಾರಾಟ ಮಾಡದಲ್ಲಿ ನಡೆಯಲಿರುವ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ವಲಸರಿ ನೇಮದ ಗೊನೆಮುಹೂರ್ತ ಇಂದು ನಡೆಯಿತು.

ದಿನಾಂಕ 28-4-2022ನೇ ಗುರುವಾರ ಬೆಳಿಗ್ಗೆ ಗಂಟೆ 10-00ಕ್ಕೆ ಮಾಣಿಗುತ್ತು ಚಾವಡಿಯಿಂದ ಭಂಡಾರ ಹೊರಟು, ಮಧ್ಯಾಹ್ನ ಗಂಟೆ 12-00ಕ್ಕೆ ಶ್ರೀ ದೈವಗಳಿಗೆ ತಂಬಿಲ, ಬಳಿಕ ಅನ್ನಸಂತರ್ಪಣೆ ಜರಗಲಿರುವುದು. ರಾತ್ರಿ ಗಂಟೆ 8-00ರಿಂದ ಶ್ರೀ ದೈವಗಳ ವಲಸರಿ ನೇಮ ಆರಂಭವಾಗಲಿದೆ ಎಂದು ಮಾಣಿಗುತ್ತು ಸಚಿನ್ ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಗ್ರಾಮದ ಅರ್ಚಕರಾದ ಅನಂತ ಭಟ್, ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ, ಮಹಾಬಲ ಶೆಟ್ಟಿ ವಾರಾಟ,ರಾಜೀವ ಶೆಟ್ಟಿ ವಾರಾಟ, ರಘುರಾಮ ಶೆಟ್ಟಿ ಸಾಗು, ರಾಜೇಶ್ ಶೆಟ್ಟಿ ಬದಿಗುಡ್ಡೆ, ಸದಾಶಿವ ಶೆಟ್ಟಿ ಶಂಭುಗ, ಲೋಕೇಶ್ ಪೂಜಾರಿ ಪಲ್ಲತ್ತಿಲ, ಗೋಪಾಲ ಮೂಲ್ಯ ನೆಲ್ಲಿ, ಸುಧೀರ್ ಶಂಭುಗ ಮತ್ತಿತರರು ಗೊನೆ ಕಡಿಯುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!