Thursday, May 2, 2024
Homeಕರಾವಳಿಉಡುಪಿಉಡುಪಿ: ನಾಳೆ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಗೊಂದಲ ಸೃಷ್ಟಿಸಬೇಡಿ : ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರಿಗೆ ಯಶ್...

ಉಡುಪಿ: ನಾಳೆ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಗೊಂದಲ ಸೃಷ್ಟಿಸಬೇಡಿ : ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರಿಗೆ ಯಶ್ ಪಾಲ್ ಸುವರ್ಣ ಮನವಿ

spot_img
- Advertisement -
- Advertisement -

ಉಡುಪಿ: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ
ಎಲ್ಲರೂ ಸರಕಾರದ ಸುತ್ತೋಲೆ ಸೂಚನೆ ಪಾಲಿಸಬೇಕು ಎಂದು ಉಡುಪಿ ಮಹಿಳಾ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲೇರಿ ಆದೇಶ ಧಿಕ್ಕರಿಸಿದ್ದರೂ
ಭವಿಷ್ಯದ ಚಿಂತನೆ ಮಾಡಬೇಕು, ನಿಯಮ ಉಲ್ಲಂಘನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,
ಮತ್ತೆ ಪರೀಕ್ಷಾಕೇಂದ್ರದಲ್ಲಿ ಗೊಂದಲ ಸೃಷ್ಟಿಸಬೇಡಿ ಎಂದು ಸುವರ್ಣ ಹೇಳಿದ್ದಾರೆ.

ನಾಳೆ ಬೆಳಗ್ಗೆಯೂ ಹಾಲ್ ಟಿಕೆಟ್ ಪಡೆಯಬಹುದು, ಹಿಜಾಬ್ ಹಾಕಿ ಪರೀಕ್ಷೆಗೆ ಬಂದರೆ ಅವಕಾಶ ಇಲ್ಲ
ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಬಂದು ಪರೀಕ್ಷೆ ಬರೆಯಿರಿ ಎಂದು ಮನವಿ ಮಾಡಿದ್ದಾರೆ.

ಆರು ವಿದ್ಯಾರ್ಥಿಗಳು ಶಿಕ್ಷಣದ ಮಹತ್ವ ಅರಿತಿಲ್ಲ.‌ ಪರೀಕ್ಷೆ ಬಗ್ಗೆ ಅವರಿಗೆ ಮಹತ್ವ ಅರಿವು ಇರುವ ಸಾಧ್ಯತೆ ಕಡಿಮೆ ಇದೆ. ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕಿಂತ ಧರ್ಮ, ಹಿಜಾಬ್ ಮುಖ್ಯವಾಗಿದೆ.
ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್, ಕ್ರಮ ಕೈಗೊಳ್ಳಲಿದೆ ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಹಿಜಾಬ್ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ ಉಡುಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರ ಪೈಕಿ ಇಬ್ಬರು ನಾಳೆ ಪರೀಕ್ಷೆ ಬರೆಯಬೇಕಿದೆ.

- Advertisement -
spot_img

Latest News

error: Content is protected !!