Saturday, June 6, 2026
HomeUncategorizedಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ ಚಿನ್ನದಂಗಡಿ ಮಾಲೀಕ: ಬಾಲಕಿಯ ತಾಯಿಯಿಂದ ಬಿತ್ತು ಚಪ್ಪಲಿಯೇಟು

ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ ಚಿನ್ನದಂಗಡಿ ಮಾಲೀಕ: ಬಾಲಕಿಯ ತಾಯಿಯಿಂದ ಬಿತ್ತು ಚಪ್ಪಲಿಯೇಟು

- Advertisement -
- Advertisement -

ಚಿಕ್ಕಮಗಳೂರು: ತರೀಕೆರೆ ಪಟ್ಟಣದ M.G ರಸ್ತೆಯಲ್ಲಿ ಚಿನ್ನದಂಗಡಿ ನಡೆಸುತ್ತಿದ್ದ ವ್ಯಕ್ತಿಯೋರ್ವ ಚಿನ್ನದಂಗಡಿಗೆ ಬರುವ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಆತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪಾಠ ಕಲಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ತಾಯಿ ಜೊತೆ ಮಹಮ್ಮದ್ ಅಮೀರ್ ಅವರ ಚಿನ್ನದಂಗಡಿಗೆ ಬಂದಿದ್ದು, ಈ ವೇಳೆ ಚಿನ್ನದ ಅಂಗಡಿ ಮಾಲೀಕ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಬಾಲಕಿಯ ತಾಯಿ ಅಮೀರ್‌ಗೆ ಚಪ್ಪಲಿಯಿಂದ ಥಳಿಸಿ ಬುದ್ದಿ ಹೇಳಿದ್ದು, ಸಾರ್ವಜನಿಕರು ಸೇರಿ ಅಮೀರ್‌ಗೆ ಧರ್ಮದೇಟು ನೀಡಿದ್ದಾರೆ.

ಮಹಮ್ಮದ್ ಅಮೀರ್ ತನ್ನ ಅಂಗಡಿಗೆ ಬರುವ ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಅಮೀರ್ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!