Sunday, August 30, 2026
Homeಕರಾವಳಿಕಿನ್ನಿಗೋಳಿ ಹೆದ್ದಾರಿಯಲ್ಲಿ ಬಸ್-ಟಿಪ್ಪರ್ ಡಿಕ್ಕಿ; ಮೂವರು ವಿದ್ಯಾರ್ಥಿಗಳಿಗೆ ಗಾಯ

ಕಿನ್ನಿಗೋಳಿ ಹೆದ್ದಾರಿಯಲ್ಲಿ ಬಸ್-ಟಿಪ್ಪರ್ ಡಿಕ್ಕಿ; ಮೂವರು ವಿದ್ಯಾರ್ಥಿಗಳಿಗೆ ಗಾಯ

- Advertisement -
- Advertisement -

ಕಿನ್ನಿಗೋಳಿ: ಕಟೀಲು ಹೆದ್ದಾರಿಯ ಬಲ್ದಾಣ ಚರ್ಚ್‌ ಬಳಿಯ ತಿರುವಿನಲ್ಲಿ ಬಸ್ ಹಾಗು ಟಿಪ್ಪರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಟಿಪ್ಪರ್ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರ ಪೈಕಿ, ಕಿನ್ನಿಗೋಳಿ ಪಕ್ಷಿಕೆರೆಯ ಮೂವರು ವಿದ್ಯಾರ್ಥಿಗಳು ಗಾಯಗೊಂಡು ಕಟೀಲು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜಶ್ರೀ ಎಂಬ ಹೆಸರಿನ ಬಸ್ ಕಟೀಲು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ವೇಳೆಗೆ ಈ ಘಟನೆ ಸಂಭವಿಸಿದೆ. ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಟಿಪ್ಪ‌ರ್ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮದಿಂದ ಬಸ್ ಹಾಗೂ ಟಿಪ್ಪರ್ ಎರಡಕ್ಕೂ ಹಾನಿಯಾಗಿರುತ್ತದೆ. ಇನ್ನು ಘಟನೆಗೆ ಮುಖ್ಯ ಕಾರಣ ಟಿಪ್ಪರ್ ನ ಸ್ಟೇರಿಂಗ್ ರಾಡ್ ತುಂಡಾಗಿದ್ದು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!