Thursday, June 4, 2026
Homeಕರಾವಳಿಸುಳ್ಯ: ಗೋದಾಮಿಗೆ ಬೆಂಕಿ ಬಿದ್ದು ವೃದ್ಧ ಸಜೀವ ದಹನ:  ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಸುಳ್ಯ: ಗೋದಾಮಿಗೆ ಬೆಂಕಿ ಬಿದ್ದು ವೃದ್ಧ ಸಜೀವ ದಹನ:  ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

- Advertisement -
- Advertisement -

ಸುಳ್ಯ: ಗೋದಾಮಿಗೆ ಬೆಂಕಿ ಬಿದ್ದು ವೃದ್ಧ ಸಜೀವ ದಹನವಾಗಿರುವ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಬಳಿಯ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನೂಜಾಲ ನಿವಾಸಿ ಮಹಾಲಿಂಗೇಶ್ವರ ಭಟ್ ಮೃತ ದುರ್ದೈವಿ. ಅಡಿಕೆ ಹಾಗೂ ಕೃಷಿ ಉತ್ಪನ್ನಗಳ ದಾಸ್ತಾನಿರಿಸಿದ್ದ ಕಟ್ಟಡಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಲಾಗುತ್ತಿದ್ದು, ಮಹಾಲಿಂಗೇಶ್ವರ ಭಟ್ ಸಜೀವ ದಹನವಾಗಿದ್ದಾರೆ.

ಇನ್ನು ಮಹಾಲಿಂಗೇಶ್ವರ ಭಟ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ತನಿಖೆ‌ ನಡೆಸಲಾಗುತ್ತಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!