Monday, May 20, 2024
Homeಚಿಕ್ಕಮಗಳೂರುಎದುರಾಳಿಗಳು ಚಡ್ಡಿ ಸುಟ್ಕೊಂಡೇ ಇರಲಿ, ನಾವು ನಮ್ಮ ಹಳೆ ಚಡ್ಡಿಗಳನ್ನು ಕಳುಹಿಸಿಕೊಡ್ತೇವೆ; ಸಿ.ಟಿ.ರವಿ ವ್ಯಂಗ್ಯ

ಎದುರಾಳಿಗಳು ಚಡ್ಡಿ ಸುಟ್ಕೊಂಡೇ ಇರಲಿ, ನಾವು ನಮ್ಮ ಹಳೆ ಚಡ್ಡಿಗಳನ್ನು ಕಳುಹಿಸಿಕೊಡ್ತೇವೆ; ಸಿ.ಟಿ.ರವಿ ವ್ಯಂಗ್ಯ

spot_img
- Advertisement -
- Advertisement -

ಚಿಕ್ಕಮಗಳೂರು: ಎದುರಾಳಿಗಳು ಚಡ್ಡಿ ಸುಟ್ಕೊಂಡೇ ಇರಲಿ, ನಾವು ನಮ್ಮ ಹಳೆ ಚಡ್ಡಿಗಳನ್ನು ಕಳುಹಿಸಿಕೊಡ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು. ಅವರು ಚಿಕ್ಕಮಗಳೂರಿನ ಬಸವಹನಹಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ,`ಬಿಜೆಪಿಗೆ ಕೋಮು ನಶೆ ಏರಿದೆ’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. 

ಹೆಡ್ಗೆವಾರ್ ಭಾರತ್ ಮಾತಾ ಕಿ ಜೈ ಅನ್ನೋ ಶಿಕ್ಷಣವನ್ನ ಕಲಿಸಿದ್ದಾರೆಯೇ ಹೊರತು ಭಾರತಕ್ಕೆ ಬಾಂಬ್ ಹಾಕುವುದನ್ನು ಕಲಿಸಿಲ್ಲ. ಮತ್ತೇಕೆ ಅವರಿಗೆ ಹೆಡ್ಗೆವಾರ್ ಕಂಡರೆ ಸಂಕಟ.  ಭಾರತಕ್ಕೆ ಬಾಂಬ್ ಹಾಕುವವರು ಸಿದ್ದರಾಮಯ್ಯಗೆ ಬಹಳ ಬೇಕಾದವರು. ಭಾರತ್ ಮಾತಾ ಕೀ ಜೈ ಅಂದರೆ ಇವರಿಗೆ ಉರಿ ಹತ್ತುತ್ತೆ ಎಂದು ಪ್ರಶ್ನಿಸಿದ್ದರು.

ಇನ್ನೂ ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಇರಬೇಕೋ, ಬೇಡ್ವೋ ಅನ್ನೋದನ್ನ ಕೇಳೋಕೆ ಸಿದ್ದರಾಮಯ್ಯ ಯಾರು? ಪಠ್ಯಪುಸ್ತಕ ಪರಿಷ್ಕರಣ ಸಮಿತಿ ತೀರ್ಮಾನ ಮಾಡಿದ್ದು, ಸರ್ಕಾರ ಅದನ್ನ ಒಪ್ಪಿರುತ್ತದೆ. ಅದರ ಮಧ್ಯದಲ್ಲಿ ನಂದು ಎಲ್ಲಿಡಲಿ ಅಂತ ಕೇಳೋಕೆ ಇವರ್ಯಾರು? ಎಂದು ಅಕ್ರೋಶ ವ್ಯಕ್ತಪಡಿಸಿದ್ದರು.

ಪ್ರಸ್ತುತ ವಿವಾದದಲ್ಲಿ ಸಿಕ್ಕಿಕೊಂಡಿರುವ ಚಡ್ಡಿ ವಿಚಾರಕ್ಕೆ ಕಿಡಿ ಕಾರಿದ ಸಿಟಿ ರವಿ ಅವರು, ಇದೇ ಚಡ್ಡಿ, ಸಂಘಿ ನರೇಂದ್ರ ಮೋದಿಯವರೇ ಅಂಬೇಡ್ಕರ್ ಹುಟ್ಟೂರನ್ನ ಅಭಿವೃದ್ಧಿ ಮಾಡಿದ್ದು. ಭೀಮ್ ಆಪ್ ತಂದಿದ್ದು. 2 ಬಾರಿ ಅನಕ್ಷರಸ್ಥ ವ್ಯಕ್ತಿಯನ್ನ ಅಂಬೇಡ್ಕರ್ ಎದುರು ನಿಲ್ಲಿಸಿ ಸೋಲಿಸಿದ್ದು ಇದೇ ಕಾಂಗ್ರೆಸ್. ಇಂದು ಅಂಬೇಡ್ಕರ್ ಬಗ್ಗೆ ನಮಗೆ ಹೇಳುತ್ತಾರೆ. ಅಂಬೇಡ್ಕರ್ ಬಗ್ಗೆ ನಮಗಿರೋ ಅಭಿಮಾನಕ್ಕೆ ಇವರಿಂದ ಯಾವುದೇ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಲೇವಡಿ ಮಾಡಿದರು.

- Advertisement -
spot_img

Latest News

error: Content is protected !!